ಪ್ರತಿನಿಧಿ ವರದಿ ಚಾಮರಾಜನಗರ
ಲೋಕಸಭಾ ಚುನಾವಣೆ-2024ರ ಸಂಬಂಧ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಏ.15 ರವರೆಗೆ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, ಏ.17ರಂದು ಎರಡನೇ ವೆಚ್ಚ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗಿರುವ ವಿವರ ಇಂತಿದೆ.
ಬಿ.ಎಸ್.ಪಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಅವರು 2,44,100 ರೂ., ಬಿ.ಜೆ.ಪಿ) ಅಭ್ಯರ್ಥಿ ಎಸ್. ಬಾಲರಾಜು ಅವರು 26,95,763 ರೂ.,ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ 46,57,245 ರೂ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ. ಕೃಷ್ಣ 12,500 ರೂ., ಕೆ.ಜೆ.ಪಿ ಅಭ್ಯರ್ಥಿ ಎಸ್. ನಿಂಗರಾಜು 17,375 ರೂ., ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನ ಕುಮಾರ್.ಬಿ 15,020 ರೂ., ಕೆ.ಆರ್.ಎಸ್ ಪಕ್ಷದ ಅಭ್ಯರ್ಥಿ ಮಹೇಶ್.ಎಂ 14,375 ರೂ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಸುಮ. ಎಸ್. 48,690 ರೂ, ಪಕ್ಷೇತರ ಅಭ್ಯರ್ಥಿಗಳಾದ ಎನ್.ಅಂಬರೀಷ್ 12,500 ರೂ., ನಿಂಗರಾಜು. ಜಿ 12,500 ರೂ., ಪ್ರದೀಪ್ ಕುಮಾರ್. ಎಂ 12,500 ರೂ., ಮಹದೇವಸ್ವಾಮಿ. ಬಿ.ಎಂ 12,500 ರೂ., ಜಿ.ಡಿ. ರಾಜಗೋಪಾಲ 17,980 ರೂ. ಹಾಗೂ ಹೆಚ್.ಕೆ. ಸ್ವಾಮಿ 12,500 ರೂ.ಗಳ ಚುನಾವಣಾ ವೆಚ್ಚದ ವಿವರ ಸಲ್ಲಿಸಿದ್ದಾರೆ ಎಂದು ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.