ಹನೂರು : ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದೆ ಎಂದು ದಿನಪೂರ್ತಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿರುವ ಘಟನೆ ಮಾರ್ಟಳ್ಳಿಯಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಗಡಿ ಗ್ರಾಮ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಿಮೇಡು ಗ್ರಾಮದ ಮರುದ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿ. ಪಟ್ಟಿಯಲ್ಲಿ ಹೆಸರು ಡಿಲೀಟ್ : ಮತದಾರರ ಪಟ್ಟಿಯಲ್ಲಿ ಹೆಸರು ಡಿಲೀಟ್ ಆಗಿದ್ದು, ನನ್ನ ಹಕ್ಕು ಮತ ಚಲಾಯಿಸಲು ನನಗೆ ಅವಕಾಶವಿಲ್ಲ. ಮುಖ್ಯವಾಗಿ ಎರಡು ಬಾರಿ ಸಹ ಹೆಸರು ನೋಂದಣಿ ಮಾಡಿಸಿದ್ದರೂ ಹೆಸರು ಕೈಬಿಟ್ಟಿದೆ ಎಂದರು ಆರೋಪಿಸಿದರು.
ಬಿಸಿಲಲ್ಲೇ ನಿರಂತರ ಕುಳಿತ ವ್ಯಕ್ತಿ : ಬಿರು ಬಿಸಿಲಿನಲ್ಲೇ ತಾನು ತನ್ನ ಕುಟುಂಬಸ್ಥರ ಜತೆಗೆ ಬಿಸಿಲನ್ನು ಲೆಕ್ಕಿಸದೆ ಪಂಚಾಯಿತಿ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ನನ್ನ ಮತ ನನ್ನ ಹಕ್ಕು ಎಂಬ ಸಂದೇಶ ಹೊಂದಿದ ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದರು.
ಕೊನೆಗೆ ಅಧಿಕಾರಿಗಳು ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ನಂತರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ.