2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಮೊದಲ ಬಾರಿಗೆ ಮತದಾನ ಮಾಡುವವರು ತಮ್ಮ ಮತಗಟ್ಟೆ ಯಾವುದು ಎಂದು ತಿಳಿಯವುದು ಹೇಗೆ ಹಾಗೂ ಎಪಿಕ್ ನಂಬರ್ ಮೂಲಕ ವೋಟರ್ ಐಡಿ ಹುಡುಕುವುದು ಹೇಗೆ ಎಂಬುದರ ಕುರಿತು ನಾವು ಮಾಹಿತಿ ನೀಡಲಿದ್ದೇವೆ. ಮೊದಲನೆಯದಾಗಿ ತಿಳಿದುಕೊಳ್ಳಬೇಕಾದ ವಿಷೆಯವೇನೆಂದರೆ ಮತದಾರರಾಗಲು ಏನು ಅರ್ಹತೆ ಇರಬೇಕು. -ಭಾರತೀಯ ಪ್ರಜೆಯಾಗಿರಬೇಕು -ಜನವರಿ 1ಕ್ಕೆ 18 ವರ್ಷಗಳನ್ನು ಪೂರೈಸಿರಬೇಕು -ಮತಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು –ಅನೂರ್ಜಿತಗೊಂಡಿರಬಾರದು
ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯಾರಿಗೆ ಅರ್ಹತೆ ಇಲ್ಲ –
ಭಾರತೀಯ ಪ್ರಜೆಯಲ್ಲದವರು -ಮಾನಸಿಕ ಸ್ಥಿಮಿತ ಇಲ್ಲದವರು -ಚುನಾವಣೆ ಸಂಬಂಧಿತ ನಿಗಧಿತ ಭ್ರಷ್ಟಾಚಾರದಲ್ಲಿ ತೊಡಗಿ ಮತದಾನ ಪ್ರಕ್ರಿಯೆಯಿಂದ ನಿಷೇಧಕ್ಕೆ ಒಳಗಾದವರು.
ಮುಂದೆ ಬರುವಂಥದ್ದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ
ಮತಕ್ಷೇತ್ರದ ನೋಂದಣಿ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯಿಂದ ನಮೂನೆ 6ನ್ನು ಪಡೆಯಿರಿ. ನಮೂನೆ ಭರ್ತಿ ಮಾಡಿ ಇಂಟರ್ನೆಟ್ನಿಂದ ನಮೂನೆ 6ನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳು ಅಥವಾ www.nsvp.in /www.ceokarnataka.nic.inನಲ್ಲಿ ದಾಖಲೆಗಳ ಪ್ರತಿಯನ್ನು ಅಪ್ಲೋಡ್ ಮಾಡಿ. ಅಥವಾ ಅಂಚೆ ಮೂಲಕ ಕಳುಹಿಸಿ. ನಮೂನೆ 6ಕ್ಕೆ ಅಗತ್ಯವಿರುವ ದಾಖಲೆಗಳು ಪಾಸ್ಪೋರ್ಟ್ ಸೈಜ್ ಕಲರ್ ಫೋಟೊ ವಯಸ್ಸು ಮತ್ತು ವಿಳಾಸದ ದೃಢೀಕರಣ 18-21 ವಯೋಮಾನದವರಿಗೆ ವಯಸ್ಸು ದೃಢೀಕರಣ ಪ್ರತಿ
ಎಪಿಕ್ ಮತದಾರರ ಫೋಟೊ ಗುರುತಿನ ಚೀಟಿ
ಮತದಾರ ನೀಡಿರುವ ವಿಳಾಸಕ್ಕೆ ಮತಗಟ್ಟೆ ಅಧಿಕಾರಿ ಭೇಟಿ ನೀಡುತ್ತಾರೆ ನಮೂನೆ ಸರಿಯಾಗಿದ್ದು, ಸ್ವೀಕೃತವಾದಲ್ಲಿ ಮತಗಟ್ಟೆ ಅಧಿಕಾರಿ ಎಪಿಕ್ ಕಾರ್ಡನ್ನು ನೀಡುತ್ತಾರೆ ಅಥವಾ ಕಚೇರಿಗೆ ಬರುವಂತೆ ಸೂಚಿಸುತ್ತಾರೆ.
ಮತದಾನ ಮಾಡುವುದು ಹೇಗೆ?
ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಬೇಕು. ಮತದಾನದ ದಿನ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ ಚುನಾವಣಾಧಿಕಾರಿಗಳ ಬಳಿಯೂ ಮತದಾರರ ಪಟ್ಟಿ ಲಭ್ಯವಿರುತ್ತದೆ. ಮೊಬೈಲ್ ಫೋನ್ ಮತ್ತಿತರೆ ವಸ್ತುಗಳಿಗೆ ಮತಗಟ್ಟೆ ಕೇಂದ್ರಕ್ಕೆ ನಿರ್ಬಂಧವಿಧಿಸಿದೆ. ಸರತಿ ಸಾಲಿನಲ್ಲಿ ನಿಂತು ಶಾಯಿ ಹಾಕಿಸಿಕೊಂಡು ಮತ ಚಲಾಯಿಸಬೇಕು.
ಮತದಾರರು ನೆನಪಿಟ್ಟುಕೊಳ್ಳಬೇಕಾದ ಸಂಗತಿ
ಮತದಾನ ದಿನಕ್ಕೆ ಮುನ್ನವೇ ನಿಮ್ಮ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಿ. ಮತದಾರರ ಫೋಟೊ ಗುರುತಿನ ಚೀಟಿಯೊಂದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಕಡ್ಡಾಯ. ಚುನಾವಣೆ ಸಂದರ್ಭದಲ್ಲಿ ನೋಂದಣಿ ಹಾಗೂ ಮತದಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಹಾಯವಾಣಿ 1950ಕ್ಕೆ ಕರೆ ಮಾಡಿ ಪಡೆಯಬಹುದು. EPIC ಕಾರ್ಡ್ ಸುರಕ್ಷಿತ ಮತ್ತು ಪೋರ್ಟಬಲ್ ಡಿಜಿಟಲ್ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ವೋಟರ್ ಸ್ಲಿಪ್ ಮತ್ತು EPIC ಕಾರ್ಡ್ ಜೊತೆಗೆ, ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್ನಂತಹ ಹೆಚ್ಚುವರಿ ಗುರುತಿನ ಚೀಟಿಯನ್ನು ಒಯ್ಯಿರಿ.
ಒಂದಕ್ಕಿಂತ ಹೆಚ್ಚಿನ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶವಿಲ್ಲ, ಹಾಗಾಗಿ ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಮುನ್ನ ಹಳೆಯ ಮತಕ್ಷೇತ್ರದ ಪಟ್ಟಿಯಲ್ಲಿ ಹೆಸರನ್ನು ತೆಗೆಸಬೇಕು. ನಿಮ್ಮ ಕ್ಷೇತ್ರದ ಹೆಸರು ಹಾಗೂ ಮಾಹಿತಿಯನ್ನು www.ceokarnataka.kar.nic.in, www.eci.nic.in, www.ecisvee.nic.in ಅಥವಾ www.nsvp.in ನಿಂದ ಪಡೆಯಬಹುದು.