ಪ್ರತಿನಿಧಿ ವರದಿ ಹುಣಸೂರು
ಹುಣಸೂರು ರೋಟರಿ ಸಂಸ್ಥೆಯಿಂದ ನಗರದ ವಿವಿಧ ಕಾಲೇಜುಗಳಲ್ಲಿ ಮತದಾನದ ಜಾಗೃತಿ ಅಂಗವಾಗಿ ಸೆಲ್ಫಿ ಸ್ಟ್ಯಾಂಡ್ ಗಳನ್ನು ಒದಗಿಸಲಾಯಿತು.
ನಗರದ ಸರ್ಕಾರಿ ಮಹಿಳಾ ಕಾಲೇಜು ಮತ್ತು ಜ್ಞಾನಧಾರ ಕಾಲೇಜಿಗೆ ಸೆಲ್ಫಿ ಸ್ಟ್ಯಾಂಡ್ ನೀಡಿ ಮಾತನಾಡಿದ ರೋಟರಿ ಅಧ್ಯಕ್ಷ ರೊ.ಚನ್ನಕೇಶವ, ಮೊದಲ ಬಾರಿಗೆ ಮತಚಲಾಯಿಸುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಾಲೂಕಿನ ವಿವಿಧ ಕಾಲೇಜುಗಳಿಗೆಸೆಲ್ಫಿ ಸ್ಟ್ಯಾಂಡ್ ಪೂರೈಸಲಾಗುತ್ತಿದೆ. ಮತದಾನ ನಮ್ಮೆಲ್ಲರ ಪವಿತ್ರ ಕರ್ತವ್ಯ ಹಾಗು ಜವಾಬ್ದಾರಿಯೂ ಕೂಡ ಹೌದು. ಸದೃಢ ಭಾರತ ನಿರ್ಮಾಣಕ್ಕಾಗಿ ಯುವ ಮತದಾರರು ತಪ್ಪದೇ ಮತಚಲಾಯಿಸಿ ನಮ್ಮ ಸರ್ಕಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರು.
ಯುವ ಮತದಾರರು ತಮ್ಮ ಅಕ್ಕಪಕ್ಕದಲ್ಲಿರುವ ಮತದಾರರಿಗೆ ಮತದಾನದ ಮಹತ್ವದ ಕುರಿತು ಮಾಹಿತಿ ನೀಡಿ ಮತಗಟ್ಟೆಗೆ ಕರೆತರುವ ಮೂಲಕ ದೇಶಸೇವೆ ಮಾಡಬೇಕೆಂದು ಕೋರಿದರು.
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸೆಲ್ಫಿ ಸ್ಟ್ಯಾಂಡ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಪ್ಪದೇ ಮತದಾನ ಮಾಡುವುದಾಗಿಯೂ ವಾಗ್ದಾನ ಮಾಡಿದರು. ರೋಟರಿ ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ ಇತರರು ಹಾಜರಿದ್ದರು.
೨೪ಊUಓ೪: ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರೋಟರಿ ಕ್ಲಬ್ ವತಿಯಿಂದ ಸೆಲ್ಫಿ ಸ್ಟ್ಯಾಂಡ್ ನೀಡುವ ಮೂಲಕ ಮೊದಲ ಮತದಾರರನ್ನು ಹುರಿದುಂಬಿಸಲಾಯಿತು. ರೋಟರಿ ಅಧ್ಯಕ್ಷ ರೊ.ಚನ್ನಕೇಶವ, ಕಾರ್ಯದರ್ಶಿ ಡಾ.ಕೆ.ಪಿ.ಪ್ರಸನ್ನ ಇತರರಿದ್ದಾರೆ.