ಮೈಸೂರು: ಮೈಸೂರಿನ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮತ ಚಲಾಯಿಸಿದ್ದಾರೆ. ತಾಯಿ ಪ್ರಮೋದಾ ದೇವಿ, ಪತ್ನಿ ತ್ರಿಷಿಕಾ ಕುಮಾರಿ ಜೊತೆಗೂಡಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಮತಗಟ್ಟೆ ಸಂಖ್ಯೆ 176ರಲ್ಲಿ ಯದುವೀರ್ ಹಾಗೂ ತ್ರಿಷಿಕಾ ಮತದಾನ ಮಾಡಿದರೆ, ಮತಗಟ್ಟೆ ಸಂಖ್ಯೆ 179ರಲ್ಲಿ ಪ್ರಮೋದಾದೇವಿ ಒಡೆಯರ್ ಮತದಾನ ಮಾಡಿದ್ದಾರೆ.
.