ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಅತ್ಯಾಚಾರದ ದೂರು ಇದೆ. ಪ್ರಜ್ವಲ್ ರೇವಣ್ಣ ತಮ್ಮ ಅಧಿಕಾರ ದುರುಪಯೋಗ ಮಾಡಿ ತನ್ನ ಮೇಲೆ ಹೇಗೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಅತ್ಯಾಚಾರ ಸಂತ್ರಸ್ತೆ ವಿವರಿಸಿದ್ದಾರೆ. ಪ್ರಜ್ವಲ್ ಅಧಿಕಾರ ದುರುಪಯೋಗಿಸಿ ದೌರ್ಜನ್ಯ ಎಸಗಿದ್ದಾರೆ. ಭಯಪಡಿಸಿ ಬಲಾತ್ಕಾರ ಮಾಡಿದ್ದಾರೆ. ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಈ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರ, ಬ್ಲ್ಯಾಕ್ಮೇಲ್, ಅಧಿಕಾರ ದುರುಪಯೋಗ ಮತ್ತು ಕೊಲೆ ಬೆದರಿಕೆ ಈ ಎಲ್ಲಾ ಗಂಭೀರ ಸ್ವರೂಪದ ಆರೋಪಗಳು ಎಫ್ಐಆರ್ನಲ್ಲಿವೆ.
ಎಂಪಿ ಕ್ವಾರ್ಟರ್ಸ್ಗೆ ಹೋದಾಗ ಮೇಲ್ಗಡೆಯ ರೂಮಿನಲ್ಲಿ ವೇಟ್ ಮಾಡಲು ಹೇಳಿದರು. ಅಲ್ಲಿ ಹೋದಾಗ ಪ್ರಜ್ವಲ್ ರೇವಣ್ಣ ಬಲಾತ್ಕಾರ ಮಾಡಿದರು. ವಿಡಿಯೋ ಚಿತ್ರೀಕರಿಸಿ, ಯಾರ ಬಳಿಯಾದರೂ ಬಾಯಿಬಿಟ್ಟರೆ ಬಹಿರಂಗಪಡಿಸುತ್ತೇನೆ. ಗಂಡನನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದರು ಎಂದೂ ಸಂತ್ರಸ್ತೆ ತಿಳಿಸಿದ್ದಾರೆ.
ಮನೆಗೆಲಸದವರು ನೀಡಿದ ಮೊದಲ ದೂರಿನಲ್ಲಿ ಎಚ್ಡಿ ರೇವಣ್ಣ ಎ1 ಆರೋಪಿಯಾಗಿದ್ದಾರೆ. ಅದರಲ್ಲಿ ಲೈಂಗಿಕ ಕಿರುಕುಳ ಆರೋಪ ಇತ್ತೇ ವಿನಃ ಅತ್ಯಾಚಾರ ಆರೋಪ ಇಲ್ಲ. ಆದರೆ, ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಎರಡನೇ ಎಫ್ಐಆರ್ನಲ್ಲಿ ಗಂಭೀರ ಆರೋಪಗಳಿವೆ. ಇದು ಪ್ರಜ್ವಲ್ಗೆ ಮುಳುವಾಗಬಹುದು.
ಇದೇ ವೇಳೆ ನಿನ್ನೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಜಿ ಸಚಿವ ರೇವಣ್ಣ ಅವರು ಇಂದು ಅರ್ಜಿ ಹಿಂಪಡೆಯುತ್ತಿದ್ದಾರೆ. ಅವರ ಮೇಲೆ ದಾಖಲಾಗಿರುವ ದೂರು ನಾನ್ ಬೇಲಬಲ್ ಅಲ್ಲ. ಸುಲಭವಾಗಿ ಜಾಮೀನು ಸಿಗುತ್ತದೆ.