ಪ್ರತಿನಿಧಿ ವರದಿ ಮಡಿಕೇರಿ
ಪದ್ಮಶ್ರೀ ಪುರಸ್ಕ್ರತ ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಗೌರವಿಸಲಾಯಿತು. ಮಾದಾಪುರದಲ್ಲಿರುವ ಸ್ವಗ್ರಹದಲ್ಲಿ ಪೋಷಕರಾದ ಮಚ್ಚಂಡ ಪ್ರಭಾ ಬೋಪಣ್ಣ ಹಾಗೂ ಮಲ್ಲಿಕಾ ಬೋಪಣ್ಣ ಸ್ವೀಕರಿಸಿದರು.
ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಮೂವೇರ ಜಯರಾಂ, ನಂದಿನೆರವಂಡ ರವಿ ಬಸಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಂಡೇರ ಲಲ್ಲು ಕುಟ್ಟಪ್ಪ ಇದ್ದರು.
ಫೋಟೋ 5 ಎಂಡಿಕೆ 01 ; ಪದ್ಮಶ್ರೀ ಪುರಸ್ಕ್ರತ ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ ಅವರ ಪರವಗಿ ಪೋಷಕರು ಸನ್ಮಾನ ಸ್ವೀಕರಿಸಿದರು.