ಎಚ್ ಡಿ ಕೋಟೆ : ಪಟ್ಟಣದಲ್ಲಿ ಪುರಸಭೆಯಿಂದ ವರ್ತಕರಿಗೆ ಎರಡು ದಿನಗಳ ಕಾಲ ಸ್ಥಳದಲ್ಲೇ ಟ್ರೇಡ್ ಲೈಸೆನ್ಸ್ ನೀಡಲು ಉದ್ದಿಮೆ ಪರವಾನಗಿ ಮೇಳ ಹಮ್ಮಿಕೊಂಡಿತ್ತು.
ಪಟ್ಟಣದ ಬಾಪೂಜಿ ವೃತ್ತದ ಇಂದಿರಾ ಕ್ಯಾಂಟೀನ್ ಮುಂಭಾಗ ಪುರಸಭೆಯ ಸಿಬ್ಬಂದಿ ಹಾಗೂ ಪುರಸಭೆ ಸದಸ್ಯರು 2024-25ನೇ ಸಾಲಿಗೆ ವರ್ತಕರ ಉದ್ದಿಮೆ ಪರವಾಗಿ ಪಡೆದುಕೊಳ್ಳಲು ಅನುಕೂಲ ವಾಗುವಂತೆ ಎರಡು ದಿನಗಳ ಕಾಲ ಪರವಾನಗಿ ಮೇಳ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದಲ್ಲಿ ಒಟ್ಟು 518 ಮಂದಿ ವರ್ತಕರಿದ್ದು, ಕಳೆದ ಸಾಲಿನಲ್ಲಿ 438 ಮಂದಿ ಉದ್ದಿಮೆ ಪರವನಾಗಿ ಪಡೆದಿದ್ದು, ಉಳಿಕೆ ಮಂದಿಗೆ ತಿಳುವಳಿಕೆ ನೀಡಲಾಗಿತ್ತು, ಅದರಂತೆ ಈಗ 2024-25 ಸಾಲಿಗೆ ವರ್ತಕರು ಪುರಸಭೆಗೆ ಅಲ್ಲೆದಾ ಡುವುದನ್ನು ತಪ್ಪಿಸಲು ವರ್ತಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಮೇಳ ಹಮ್ಮಿಕೊಳ್ಳಲಾಗಿತ್ತು.
ಎರಡು ದಿನಗಳ ಮೇಳದಲ್ಲಿ 190 ಮಂದಿ ವರ್ತಕರು ಪರವಾನಗಿ ಪಡೆದಿದ್ದು ಮುಂದಿನ ದಿನಗಳಲ್ಲಿ ಉಳಿಕೆ ವರ್ತಕರು ಲೈಸೆನ್ಸ್ ಅನ್ನು ಪಡೆದುಕೊಳ್ಳುವಂತೆ ಪುರಸಭೆಯ ಮುಖ್ಯ ಅಧಿಕಾರಿ ಪಿ. ಸುರೇಶ್ ಮನವಿ ಮಾಡಿದ್ದಾರೆ ಇಲ್ಲದಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದು ಟ್ರೇಡ್ ಲೈಸೆನ್ಸ್ ಪೂರ್ಣಗೊಳಿಸಿದರು. ವರ್ತಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವರ್ತಕರು ಸಹಕರಿಸಿದರು.