ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿಗೆ ಬಿ.ಕಾಂ ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.99 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆ ತೆಗೆದುಕೊಂಡಿದ್ದ 76 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 59 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂತೆಯೇ, ವಿದ್ಯಾರ್ಥಿನಿ ಕೆ.ಬಿ.ಅಮೂಲ್ಯ 700ಕ್ಕೆ 690 ಅಂಕಗಳನ್ನು ಪಡೆದು 3 ವಿಷಯಗಳಲ್ಲಿ ನೂರಕ್ಕೆ 100 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರೆ, ಜೆ.ಶಾಲಿನಿ 700ಕ್ಕೆ 688 ಅಂಕಗಳನ್ನು ಪಡೆದು 2 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳಿಸಿದ್ದಾರೆ.
ಇದೇ ರೀತಿ ಜೆ.ದೇವಿಕಾ (687) ಅಂಕಪಡೆದು 2 ವಿಷಯಗಳಲ್ಲಿ ನೂರು ಅಂಕಗಳಿಸಿ ತೃತೀಯ ಸ್ಥಾನ, ಟಿ.ಕೆ.ಸಂಜನಾ (681) ಅಂಕಪಡೆದು 2 ವಿಷಯಗಳಲ್ಲಿ 100 ಅಂಕಪಡೆದು ನಾಲ್ಕನೇ ಸ್ಥಾನದಲ್ಲಿದ್ದು, ಎಸ್.ಸಹನಾ (679) ಅಂಕಗಳಿಸಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆಯ ಫಲಿತಾಂಶದಲ್ಲಿ 33 ವಿದ್ಯಾರ್ಥಿಗಳು ಶೇ.99 ರಷ್ಟು ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ಮಾತ್ರವಲ್ಲದೇ, ಜಿಎಸ್ ಟಿ-ಲಾ ಆ್ಯಂಡ್ ಪ್ರಾಕ್ಟಿಕಲ್ ವಿಷಯದಲ್ಲಿ 13 ವಿದ್ಯಾರ್ಥಿಗಳು, ಐಎಎಸ್-1 ವಿಷಯದಲ್ಲಿ 8 ವಿದ್ಯಾರ್ಥಿಗಳು, ಎಫ್ ಎಂ ವಿಷಯದಲ್ಲಿ 6 ವಿದ್ಯಾರ್ಥಿಗಳು, ಎಫ್1 ಆ್ಯಂಡ್ ಎಂ ವಿಷಯದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಯಲ್ಲಿ ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳನ್ನು ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಎ.ಡಿ.ಕೃಮಾರಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಸಹ ಕಾರ್ಯದರ್ಶಿ ನಾಗರಾಜು ಬಾಬು, ಖಜಾಂಚಿ ಸುಮಂತ್ ವಿ.ಅಚ್ಚಮ್, ಸಂಯೋಜಕಿ ಅನಿತ ಗಿರೀಶ್, ಕಾಲೇಜು ಪ್ರಾಂಶುಪಾಲ ಜೆ.ರವಿಕುಮಾರ್ ಅವರು ಅಭಿನಂದಿಸಿದ್ದಾರೆ.
18ಕೆಜಿಎಲ್-2
ಫೋಟೋ ಶೀರ್ಷಿಕೆ:
ಬಿ.ಕಾಂ ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಫೋಟೋ ಇದೆ.