ಮೈಸೂರು: ವಿಧಾನಸಭೆ ಚುನಾವಣೆ ವೇಳೆ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ ಬಿಜೆಪಿ 130 ರಿಂದ 60 ಕ್ಕೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ 26 ರಿಂದ 6 ಕ್ಕೆ ಬರುತ್ತಾರೆ ನೋಡಿ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.
ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಅವರು ಮಾತಾಡಿದ್ರಾ? ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ? ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಹೇರ್ ಸ್ಟೈಲ್ ನಲ್ಲಿದ್ದಾರೆ ನಮಗ್ಯಾಕೆ ಆ ಥರ ಸ್ಟೈಲ್ ನಲ್ಲಿ ಬಿಡೋಕೆ ಅವಕಾಶ ಇಲ್ಲ ಅಂತಾ ಕೇಳುತ್ತಾರೆ ಏನೂ ಮಾಡಲಿ ಹೇಳಿ? 40% ಕಮೀಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಹೇರ್ ಕಟ್ ಮಾಡಲು ಅದು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ತಜ್ಞತೆ ನೋಡಿ ಆ ಕೆಲಸ ಕೊಡುತ್ತೇನೆ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ದಿ ಇಲ್ಲ. ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ಇವರು ಯಾರೋ ಮಾತು ನಾನು ಕೇಳಲ್ಲ. ಜೂನ್ 4 ಆಗಲಿ ನಂತರ ವಿಜಯೇಂದ್ರ ಅವರಿಗೆ ಬೇರೆಯದೆ ಕೆಲಸ ಕೊಡ್ತಿನಿ ಎಂದು ಮಧು ಬಂಗಾರಪ್ಪ ಟಾಂಗ್ ಕೊಟ್ಟರು.
ನಾನು ಸವಿತಾ ಸಮಾಜಕ್ಕೆ ಅವಮಾನ ಆಗುವ ರೀತಿ ಮಾತಾಡಿಲ್ಲ. ನಾನು ವಿಜಯೇಂದ್ರ ಗೆ ಉತ್ತರ ಕೊಟ್ಟಿದ್ದಕ್ಕೆ ಇವರು ಯಾಕೆ ಪ್ರತಿಭಟನೆ ಮಾಡಬೇಕು. ಯಾವುದೇ ಸಮಾಜಕ್ಕೆ ಅವಮಾನ ಮಾಡುವ ರೀತಿ ನಡವಳಿಕೆಯನ್ನು ನನ್ನ ತಂದೆ ಅವರು ನನಗೆ ಹೇಳಿ ಕೊಟ್ಟಿಲ್ಲ. ಯಾರೋ ಅವರಿಗೆ ಮಿಸ್ ಲೀಡ್ ಮಾಡಿರಬೇಕು ಎಂದರು.