ಪ್ರತಿನಿಧಿ ವರದಿ ಮಡಿಕೇರಿ
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 9.06 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 8.43 ಮಿ.ಮೀ, ಪೊನ್ನಂಪೇಟೆ 6.95 ಮಿ.ಮೀ, ಸೋಮವಾರಪೇಟೆ 20 ಮಿ.ಮೀ., ಕುಶಾಲನಗರ 9.90 ಮಿ.ಮೀ, ಮಡಿಕೇರಿ ಕಸಬಾ 8, ನಾಪೋಕ್ಲು 4.40, ಸಂಪಾಜೆ 11, ಭಾಗಮಂಡಲ 10.30, ಹುದಿಕೇರಿ 27, ಶ್ರೀಮಂಗಲ 0.80, ಸೋಮವಾರಪೇಟೆ 24.40, ಶನಿವಾರಸಂತೆ 12.80, ಶಾಂತಳ್ಳಿ 35, ಕೊಡ್ಲಿಪೇಟೆ 7.80, ಕುಶಾಲನಗರ 8.60, ಸುಂಟಿಕೊಪ್ಪ 11.20 ಮಿ.ಮೀ.ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ಒಳಹರಿವು 520 ಕ್ಯುಸೆಕ್ ಇದ್ದು, ಕಳೆದ ವರ್ಷ ಇದೇ ದಿನ 104 ಕ್ಯುಸೆಕ್ ಒಳಹರಿವು ಇತ್ತು. ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ನೀರಿನ ಮಟ್ಟ 2826.78 ಅಡಿಗಳು. ಕಳೆದ ವರ್ಷ ಇದೇ ದಿನ 2818.88 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 4.20 ಮಿ.ಮೀ., ಇಂದಿನ ನೀರಿನ ಒಳಹರಿವು 520 ಕ್ಯುಸೆಕ್, ಕಳೆದ ವರ್ಷ ಇದೇ ದಿನ 104 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 30 ಕ್ಯುಸೆಕ್.