ಬೆಂಗಳೂರು: ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಾಹನ ಪಾರ್ಕಿಂಗ್ ತಲೆನೋವಾಗಿ ಪರಿಣಮಿಸಿದೆ. ಅದರಲ್ಲಂತು ಜನಬಿಡ ಪ್ರದೇಶಗಳಾದ ಮೆಜೆಸ್ಟಿಕ್, ವಿಧಾನಸೌಧ ಅಕ್ಕ-ಪಕ್ಕ ವಾಹನ ಪಾರ್ಕಿಂಗ್ಗೆ ಜನರು ಪರದಾಡುತ್ತಿದ್ದಾರೆ. ಈ ಸಮಸ್ಯೆಗೆ ಶ್ರೀಘ್ರದಲ್ಲೇ ಮುಕ್ತಿ ದೊರೆಯಲಿದೆ. ಬೆಂಗಳೂರು ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್ ಬಳಿ ಬಹುಮಡಿ ಪಾರ್ಕಿಂಗ್ ಸಂಕೀರ್ಣವು ನಿರ್ಮಾಣವಾಗಿದ್ದು, ಜೂನ್ 20 ರಂದು ಉದ್ಘಾಟನೆಗೊಳಲ್ಲಿದೆ.