ಟಿ20 ವಿಶ್ವಕಪ್ 2024ಕ್ಕೆ ತೆರೆ ಬಿದ್ದಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ 17 ವರ್ಷಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.
T20 ವಿಶ್ವಕಪ್ 2024 ಪ್ರಶಸ್ತಿ ವಿಜೇತರ ಪಟ್ಟಿ:
- ವಿನ್ನರ್- ಭಾರತ
- ರನ್ನರ್ ಅಪ್- ಸೌತ್ ಆಫ್ರಿಕಾ
- ಪಂದ್ಯಾವಳಿಯ ಆಟಗಾರ – ಜಸ್ಪ್ರೀತ್ ಬುಮ್ರಾ (4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್)
- ಫೈನಲ್ನಲ್ಲಿ ಪಂದ್ಯ ಶ್ರೇಷ್ಠ – ವಿರಾಟ್ ಕೊಹ್ಲಿ (76 ರನ್)
- ಫೈನಲ್ನ ಸ್ಮಾರ್ಟ್ ಕ್ಯಾಚ್ – ಸೂರ್ಯಕುಮಾರ್ ಯಾದವ್
- ಅತಿ ಹೆಚ್ಚು ರನ್ – ರಹಮಾನುಲ್ಲಾ ಗುರ್ಬಾಝ್ (281 ರನ್)
- ಅತಿ ಹೆಚ್ಚು ವಿಕೆಟ್ಗಳು – ಅರ್ಷದೀಪ್ ಸಿಂಗ್ ಮತ್ತು ಫಝಲ್ಹಕ್ ಫಾರೂಕಿ (ತಲಾ 17 ವಿಕೆಟ್)
- ಗರಿಷ್ಠ ಸ್ಕೋರ್ – ನಿಕೋಲಸ್ ಪೂರನ್ (98 ರನ್ vs ಅಫ್ಘಾನಿಸ್ತಾನ್)
- ಅತ್ಯುತ್ತಮ ಬೌಲಿಂಗ್- ಫಝಲ್ಹಕ್ ಫಾರೂಕಿ (9/5 vs ಉಗಾಂಡ)
- ಅತ್ಯಧಿಕ ಸ್ಟ್ರೈಕ್ ರೇಟ್ – ಶಾಯ್ ಹೋಪ್ (187.71)
- ಅತ್ಯುತ್ತಮ ಎಕಾನಮಿ ರೇಟ್ – ಟಿಮ್ ಸೌಥಿ (3.00)
- ಅತ್ಯಧಿಕ ಸಿಕ್ಸರ್ – ನಿಕೋಲಸ್ ಪೂರನ್ (17 ಸಿಕ್ಸ್)
- ಅತ್ಯಧಿಕ 50+ ಸ್ಕೋರ್- ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಝ್ (ತಲಾ 3)
- ಅತೀ ಹೆಚ್ಚು ಕ್ಯಾಚ್- ಐಡೆನ್ ಮಾರ್ಕ್ರಾಮ್ (8 ಕ್ಯಾಚ್ಗಳು)