ಪ್ಯಾನ್ ಇಂಡಿಯಾ ಚಿತ್ರಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಶಶಾಂಕ್. ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಶಶಾಂಕ್ ಕೈಜೋಡಿಸಿದ್ದಾರೆ.ಶಶಾಂಕ್ ಮತ್ತು ಅರ್ಜುನ್ ಜನ್ಯ ಜೊತೆಗೂಡಿ ಕೈಗೆತ್ತುಕೊಂಡಿರುವ 5 ನೇ ಚಿತ್ರ ಇದಾಗಿದ್ದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ಪೋಸ್ಟ್ ಮಾಡಿದ್ದಾರೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಶಶಾಂಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಈ ಚಿತ್ರ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ 5ನೇ ಬಾರಿ ಅರ್ಜುನ್ ಜನ್ಯ ಜೊತೆ ಒಂದಾಗುತ್ತಿರೋದಾಗಿ ಶಶಾಂಕ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಸದ್ಯ DKS -02 ಅಂತ ಹೆಸರಿಡಲಾಗಿದ್ದು, ಈ ಮೂಲಕ ಸಂಗೀತ ಸಂಯೋಜನೆಯ ಕೆಲಸ ಶುರು ಆಗಿದೆ ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಸಿನಿಮಾದ ಟೈಟಲ್ ಶೀಘ್ರದಲ್ಲಿಯೇ ಅನೌನ್ಸ್ ಮಾಡುವ ಪ್ಲ್ಯಾನ್ ಕೂಡ ಹಾಕಲಾಗಿದೆ. ಈ ವಿಚಾರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ಡೈರೆಕ್ಟರ್ ಶಶಾಂಕ್.
ಈ ಹಿಂದೆ ಮುಂಗಾರು ಮಳೆ 2, ಜರಾಸಂಧ, ಲವ್ 360, ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕಾಗಿ ಶಶಾಂಕ್ ಜೊತೆ ಅರ್ಜುನ್ ಜನ್ಯ ಕೆಲಸ ಮಾಡಿದ್ದಾರೆ. ಇದೀಗ ಹೊಸ ಚಿತ್ರದ ಮೂಲಕ ಇವರಿಬ್ಬರು ಮತ್ತೆ ಜೊತೆಯಾಗ್ತಿರೋದು ಸಿನಿಪ್ರಿಯರಿಗೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.