ಬಹುಭಾಷಾ ನಟಿ ಪ್ರಣೀತ ಸುಭಾಷ್ ತಮ್ಮ ಅಭಿಮಾನಿಗಳೊಂದಿಗೆ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಅಪಾರ ಅಭಿಮಾನಿಗಳನ್ನ ಹೊಂದಿರುವ ಪ್ರಣೀತಾ, ಒಂದುಕಾಲದಲ್ಲಿ ಬಹು ಬೇಡಿಕೆಯ ನಟಿ. ಈಗಲೂ ಸಿನಿ ಜರ್ನಿಯಲ್ಲಿ ಬ್ಯುಸಿ ಇರುವ ಇವರು ಸೋಷಿಯಲ್ ಮೀಡಿಯಾದಲ್ಲಿಯೂ ತುಂಬಾ ಆಕ್ಟಿವ್ ಇರ್ತಾರೆ. ಪ್ರಣೀತಾ ತಮ್ಮ ಬೋಲ್ಡ್ ಲುಕ್ ಫೋಟೊಗಳನ್ನ ಅಭಿಮಾನಿಗಳೊಂದಿಗೆ ಶೇರ್ ಮಾಡ್ತಾನೆ ಇರ್ತಾರೆ.
ಇಂದು ಫೋಟೋವೊಂದನ್ನ ಪ್ರಣೀತಾ ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸದ್ದು ಮಾಡ್ತಿದೆ. ಹೌದು ತಮ್ಮ ಇನ್ಟ್ಸಾಗ್ರಾಂ ನಲ್ಲಿ ಬೇಬಿ ಬಂಪ್ ಫೋಟೊವನ್ನ ಪೋಸ್ಟ್ ಮಾಡುವ ಮೂಲಕ ಮತ್ತೊಮ್ಮೆ ತಾಯಿಯಾಗುತ್ತಿರುವ ಸಿಹಿಸುದ್ದಿಯನ್ನ ತಮ್ಮ ಫ್ಯಾನ್ಸ್ ಗಳೊಂದಿಗೆ ಹಂಚಿಕೊಂಡಿದ್ದಾರೆ ಪ್ರಣೀತಾ ಸುಭಾಷ್. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರಣೀತ ಸುಭಾಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಶೇರ್ ಮಾಡಿದ್ದಾರೆ.
“ರೌಂಡ್ 2., ಇನ್ಮೇಲೆ ಪ್ಯಾಂಟ್ ಗಳ ಅಳತೆ ಸರಿಹೋಗಲ್ಲ “ಎಂಬ ಕ್ಯಾಪ್ಶನ್ ಒಟ್ಟಿಗೆ ಬೇಬಿ ಬಂಪ್ ಫೋಟೊಗಳನ್ನ ಪೋಸ್ಟ್ ಮಾಡಿರುವ ಪ್ರಣೀತಾ, ಬೇಬಿ ಬಂಪ್ ಫೋಟೋಗಳಲ್ಲಿ ಸಖತ್ ಕ್ಯೂಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಬಹುಭಾಷಾ ನಟಿ ಪ್ರಣೀತ ಸುಭಾಷ್ ತಮ್ಮ ಬಹುಕಾಲದ ಗೆಳೆಯ ನಿತೀನ್ ರಾಜು ಅವರನ್ನ 2021 ರಲ್ಲಿ ಮದುವೆಯಾಗಿದ್ದರು. 2022ರಲ್ಲಿ ತಮ್ಮ ಮಗಳನ್ನ ವೆಲ್ ಕಮ್ ಮಾಡಿಕೊಂಡಿದ್ದ ಪ್ರಣೀತ, ಮೊದಲ ಮಗುವಿನ ನಂತರವೂ ಸಖತ್ ಫಿಟ್ ಆಗಿದ್ದರು. ಹಾಗೂ ತನ್ನ ಸಿನಿ ಕರಿಯರ್ ಅನ್ನೂ ಮುಂದುವರೆಸಿದ್ದರು. ಇದೀಗ ಎರಡನೆ ಮಗುವಿನ ನಿರೀಕ್ಷೆಯಲ್ಲಿರುವ ಇವರಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನ ಹರಿಸಿದ್ದಾರೆ.