ಪ್ರತಿನಿಧಿ ವರದಿ ನಾಪೋಕ್ಲು
ನಾಪೋಕ್ಲು ಹಳೇ ತಾಲೂಕು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಟ್ರ್ಯಾಕ್ಟರ್ ನಿಂದ ಬಿದ್ದು ಮೃತಪಟ್ಟದನೆ.
ಬಾವಲಿ ಗ್ರಾಮದ ಮೂಕಂಡಬಾಣೆ ಪೈಸಾರಿ ನಿವಾಸಿ ಅಲೆಕ್ಸ್ ಹಾಗೂ ಮೇರಿ ದಂಪತಿ ಪುತ್ರ ಅಂಥೋಣಿ (43) ಮೃತ ದುರ್ದೈವಿ.
ತರಕಾರಿ ಅಂಗಡಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಳೇ ತಾಲೂಕಿನಲ್ಲಿರುವ ಸಹೋದರಿಯ ಮಗನ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಟ್ರ್ಯಾಕ್ಟರ್ ನಲ್ಲಿ ಬರುವ ಸಂದರ್ಭ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಬಿದ್ದರು. ನಾಪೋಕ್ಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಯು ಪಲಕಾರಿಯಾಗದೆ ಮೃತಪಟ್ಟಿದರೆ.
ಟ್ರ್ಯಾಕ್ಟರ್ ಚಾಲಕ ಮೂಕಂಡಬಾಣೆ ಪೈಸಾರಿ ನಿವಾಸಿ ಶಿವಕುಮಾರ್ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.