ಮುಡಾದಲ್ಲಿ ಭಾರಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೆ ಆರ್ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲೂ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾದರಿ ಆಡಳಿತ ಬರಲಿದೆ.ಜೈಲಿನಿಂದಲೇ ಆಡಳಿತ ಮಾಡುವ ಪರಿಸ್ಥಿತಿ ಬರಲಿದೆ ಎಂದು ಕಿಡಿಕಾರಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು.ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸೂಚನೆ ನೀಡಬೇಕಿತ್ತು.ಆದರೆ ಬಿಜೆಪಿ ತಪ್ಪು ಮಾಡಿದೆ ಎಂದು ನೆಪ ಹೇಳುತ್ತಿದ್ದಾರೆ.ಅರವಿಂದ ಕೇಜ್ರಿವಾಲ್ ಜೈಲಿನಿಂದ ಆಧಿಕಾರ ಮಾಡುತ್ತಿದ್ದಾರೆ, ನಮ್ಮದೇನು ಎನ್ನುವ ರೀತಿ ಇದ್ದಾರೆ. ಈ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಸಾವಿರಾರು ಕೋಟಿ ಹಗರಣವಾಗಿರುವುದರಿಂದ ಇಡಿ ಮೂಲಕ ತನಿಖೆಗೆ ಒತ್ತಾಯಿಸುತ್ತೇವೆ.ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಚಾಮುಂಡಿ ಬೆಟ್ಟದ ಪ್ರಾಧಿಕಾರ ರಚನೆ ಮೂಲಕ ರಾಜಮನೆತನದ ಅಧಿಕಾರ ಮೊಟಕು ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಶ್ರೀವತ್ಸ ,ರಾಜ ಮನೆತನದ ಅಧಿಕಾರ ಮೊಟಕುಗೊಳಿಸಲು ಜನರ ವಿರೋಧವಿದೆ.ಇದಕ್ಕೆ ನನ್ನ ವಿರೋಧವೂ ಇದೆ.ನಾವು ರಾಜಮನೆತನದ ಪರ ಇದ್ದೇವೆ. ಈ ಬಗ್ಗೆ ದಸರಾ ಹೈ ಪವರ್ ಕಮಿಟಿ ಸಭೆಯಲ್ಲಿ ಸಿಎಂ ಜೊತೆ ಮಾತನಾಡುತ್ತೇನೆ.ಚಾಮುಂಡಿ ಬೆಟ್ಟದ ಪ್ರಾಧಿಕಾರದ ಜೊತೆಗೆ ದಸರಾ ಪ್ರಾಧಿಕಾರ ಸೇರಿಸಲು ಮನವಿ ಮಾಡಿದ್ದೆವು.ಈ ಎಲ್ಲದರ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.