ಬೆಟ್ಟದಪುರ ಸಮೀಪದ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ, (ಪ್ರಾಥಮಿಕ ವಿಭಾಗ)ದಲ್ಲಿ ಹಳೆಯ ವಿದ್ಯಾರ್ಥಿನಿ ಅನಿತಾ 60 ಸಾವಿರ ರೂ. ಬೆಲೆಬಾಳುವ ಪ್ರೊಜೆಕ್ಟರ್ ಅನ್ನು ಶಾಲೆಗೆ ಇತ್ತೀಚೆಗೆ ಕೊಡುಗೆಯಾಗಿ ನೀಡಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಕಾವ್ಯ ಜನಾರ್ಧನ್, ಮುಖಂಡರಾದ ಸುರೇಶ್, ಶಿವಮ್ಮ, ಗೋವಿಂದೆಗೌಡ, ನಾರಾಯಣಗೌಡ, ರಾಮೇಗೌಡ, ಅಣ್ಣಯ್ಯಚಾರಿ, ಮುಖ್ಯಶಿಕ್ಷಕ ಕೆ.ಸಿ.ಸತೀಶ್ ಉಪಸ್ಥಿತರಿದ್ದರು .