ಚಂದನವನದ ನಟ ರಾಕ್ಷಸ ಡಾಲಿ ಧನಂಜಯ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಇದೇ ಆಗಸ್ಟ್ 23 ರಂದು ನಟ ಡಾಲಿ ಧನಂಜಯ್ ಹುಟ್ಟುಹಬ್ಬವಿದ್ದು, ಅಭಿಮಾನಿಗಳೊಡನೆ ಆಚರಿಸಿಕೊಳ್ಳಲಾಗದ ಕಾರಣ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಅಲ್ಲದೆ ಎಲ್ಲಿರುತ್ತಿರೋ ಅಲ್ಲಿಂದಲೇ ಹರಸಿ, ಹಾರೈಸಿ ಎಂದಿದ್ದಾರೆ.
ಕಾರಣಾಂರತಗಳಿಂದ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಿಲ್ಲ ಹೀಗಾಗಿ ಕ್ಷಮೆಯಿರಲಿ ಎಂದು ನಟ ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಆದರೆ ಅಭಿಮಾನಿಗಳಿಗೆ ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆಯ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ ಎಂದೂ ಕೂಡಾ ಹೇಳಿರುವ ಇವರು ಗುಡ್ ನ್ಯೂಸ್ ಇದೆ ಎಂಬುದನ್ನ ಸೂಕ್ಷ್ಮವಾಗಿ ರಿವೀಲ್ ಮಾಡಿದ್ದಾರೆ.
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ಆ.23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನು ಸಂಭ್ರಮಿಸುವ ಉತ್ಸಾಹವಿದ್ದರು, ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತಿರೋ ಅಲ್ಲಿಂದಲೇ ಹರಸಿ. ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆಯ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ. ನಿಮ್ಮ ಡಾಲಿ ಧನಂಜಯ ಎಂದು ಬರೆದುಕೊಂಡಿದ್ದಾರೆ.