ಆರೋಪ ಸಂಬಂಧ ಒಂದು ಸಣ್ಣ ದಾಖಲೆ ಬಿಡುಗಡೆ ಮಾಡಿದರೂ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ನನ್ನ ಮೇಲಿನ ಆರೋಪ ಸುಳ್ಳಾದರೆ ಲಕ್ಷ್ಮಣ್ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಎಂದು ಶಾಸಕ ಶ್ರೀವತ್ಸ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗೆ ಸವಾಲ್ ಹಾಕಿದ್ದಾರೆ.
ಮುಡಾದಿಂದ ಜಿ ಕೆಟಗರಿ ಸೈಟ್ ಪಡೆದಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿರುವ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಶ್ರೀವತ್ಸ, ನನ್ನ ವಿರುದ್ದ ಮಾಡಿರುವ ಆರೋಪ ಸಾಬೀತುಪಡಿಸಿದರೆ 24 ಗಂಟೆಗಳಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು, ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರು ಆರೋಪಿಸಿರುವ ಸಂಬಂಧ ಒಂದು ಸಣ್ಣ ದಾಖಲೆ ಬಿಡುಗಡೆ ಮಾಡಿದರೂ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ನನ್ನ ಮೇಲಿನ ಆರೋಪ ಸುಳ್ಳಾದರೆ ಲಕ್ಷ್ಮಣ್ ರಾಜಕೀಯ ನಿವೃತ್ತಿ ಪಡೆಯುತ್ತಾರಾ? ಎಂದು ಸವಾಲೆಸಗಿದ್ದಾರೆ. ಅಲ್ಲದೆ ಮುಡಾ ಹಗರಣ ಬೆಳಕಿಗೆ ತಂದ ಕಾರಣ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಆದರೆ ಮುಡಾ ಹಗರಣ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಎಂ ಲಕ್ಷ್ಮಣ್ ಆರೋಪಕ್ಕೆ ಶಾಸಕ ಶ್ರೀವತ್ಸ ತಿರುಗೇಟು ನೀಡಿದ್ದಾರೆ.