ಅರಮನೆ ನಗರಿ ಮೈಸೂರಲ್ಲಿ ವಿಚಿತ್ರ ಟ್ರಾಫಿಕ್ ವೈಯೋಲೇಶನ್ ಕೇಸ್ ಬೆಳಕಿಗೆ ಬಂದಿದೆ. ಮನೆಯಲ್ಲಿ ನಿಂತಿದ್ದ ವಾಹನಕ್ಕೆ ದಂಡದ ನೋಟಿಸ್ ಬಂದಿದ್ದು, ವಾಹನ ಮಾಲೀಕರು ದಂಗಾಗಿದ್ದಾರೆ. ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ವಾಹನ ಚಾಲನೆ ಸೇರಿದಂತೆ ಹಲವು ನೋಟಿಸ್ ಗಳು ಮನೆಗೆ ಬಂದಿದೆ. ಹೋಂಡಾ ಡಿಯೋ ಗಾಡಿ ಮಾಲೀಕರಿಗೆ ಬಂದಿರುವ ಸುಮಾರು 14 ನೋಟಿಸ್ ನೋಡಿ ಮಾಲೀಕರು ತಬ್ಬಿಬಾಗಿದ್ದಾರೆ. ನಿರಂತರ ನೋಟಿಸ್ ಗಳು ಬಂದ ಬಳಿಕ ಪರಿಶೀಲನೆ ಮಾಡಿದ ವೇಳೆ ತಮ್ಮ ವಾಹನದ ಸಂಖ್ಯೆಯನ್ನ ಮತ್ತೊಬ್ಬರು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಕಪ್ಪು ಬಣ್ಣದ KA55 Y5126 ಡಿಯೋ ಬದಲಿಗೆ
ಹಳದಿ ಬಣ್ಣದ ಡಿಯೋ ಗೆ ಅದೇ ಸಂಖ್ಯೆ ನಂಬರ್ ಪ್ಲೇಟ್ ಬಳಸುತ್ತಿರುವುದು ಗೊತ್ತಾಗಿದೆ.
ಎಐ ಕ್ಯಾಮರಾದಿಂದ ಪ್ರಕರಣ ಬೆಳಕಿಗೆ ಬಂದಿದೆ.ತಮ್ಮ ವಾಹನ ಸಂಖ್ಯೆಯನ್ನೆ ಅಳವಡಿಸಿಕೊಂಡು ಮತ್ತೊಬ್ಬರು ವಾಹನ ಚಾಲನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದಷ್ಟು ಬೇಗ ನಕಲಿ ವಾಹನ ಚಲಾಯಿಸುತ್ತಿರುವ ವಾಹನ ಸವಾರರನ್ನು ಕಂಡು ಹಿಡಿಯಬೇಕು.ನಮ್ಮ ವಾಹನದ ಸಂಖ್ಯೆ ಮತ್ತಷ್ಟು ದುರ್ಬಳಕೆ ಆಗುವುದನ್ನ ತಡೆಯಬೇಕು ಎಂದು ವಾಹನ ಮಾಲೀಕರು ಪೋಲೀಸರ ಮೊರೆ ಹೋಗಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಸರಸ್ವತಿಪುರಂ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.