ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಹಾಗೂ ಹೀರೋಯಿನ್ ಸೋನಲ್ ಮದ್ವೆ ಸಂಭ್ರಮ ಇನ್ನೂ ಮುಗಿದಿಲ್ಲ. ಸ್ಟಾರ್ ಜೋಡಿ ಸದ್ಯ ಪ್ರೈವೇಟ್ ಟೈಂ ಎಂಜಾಯ್ ಮಾಡ್ತಿದೆ. ತರುಣ್ ಅಂಡ್ ಸೋನಲ್ ದಂಪತಿಗೆ ಎಲ್ಲೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ಆಗಸ್ಟ್ 11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಬಾಳ ಸಾಂಗತ್ಯಕ್ಕೆ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿ ಕಾಲಿಟ್ಟಿತ್ತು. ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದೆ. . ಸೆ. 1ರಂದು ಮಂಗಳೂರಿನಲ್ಲಿ ಈ ಜೋಡಿ ಮತ್ತೊಮ್ಮೆ ಉಂಗುರ ಬದಲಿಸಿಕೊಳ್ಳಲಿದೆ.
ಆ ಮೂಲಕ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಸೋನಲ್ ಫ್ಯಾಮಿಲಿಯಲ್ಲಿ ಮತ್ತೊಮ್ಮೆ ಸಂಭ್ರಮ ಶುರುವಾಗಿದೆ. ಮದುವೆಯ ಭಾಗವಾಗಿ ಸೋನಲ್ ಮನೆಯಲ್ಲಿ ರೋಸ್ ಸೆಲೆಬ್ರೇಷನ್ ನಡೆದಿದೆ.
ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್ನಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿಯ ವಿವಾಹ ನೆರವೇರಿತ್ತು. ಇದೀಗ ಕ್ರೈಸ್ತ ಸಂಪ್ರದಾಯದಂತೆ ಮದುವೆಗೆ ತಯಾರಿ ಶುರುವಾಗಿದೆ.ಸೆಪ್ಟೆಂಬರ್ 1ರಂದು ಮಂಗಳೂರಿನ ಚರ್ಚ್ವೊಂದರಲ್ಲಿ ಅದ್ಧೂರಿಯಾಗಿ ಈ ಜೋಡಿ ಮತ್ತೆ ಉಂಗುರ ಬದಲಿಸಿಕೊಂಡು ವಿವಾಹವಾಗಲಿದೆ. ರೋಸ್ ಸೆಲೆಬ್ರೇಷನ್ನಲ್ಲಿ ಸೋನಲ್ ಭಾಗವಹಿಸಿದ್ದಾರೆ.
ಕುಟುಂಬಸ್ಥರು, ಸ್ನೇಹಿತರ ಜತೆಗೆ ರೋಸ್ ಸೆಲೆಬ್ರೇಷನ್ ಮಾಡಿ ಸಂಭ್ರಮಿಸಿದ್ದಾರೆ. ಗೋಲ್ಡ್ ಕಲರ್ ಧಿರಿಸಿನಲ್ಲಿ ನಟಿ ಸೋನಲ್ ಮಿರಮಿರ ಮಿಂಚಿದ್ದಾರೆ. ಸೆ. 1ರ ಕ್ರಿಶ್ಚಿಯನ್ ಸಂಪ್ರದಾಯದ ಮದುವೆ ಬಳಿಕ ಅದ್ಧೂರಿ ರಿಸೆಪ್ಶನ್ ಕೂಡ ಅದ್ದೂರಿಯಾಗಿ ನಡೆಯಲಿದೆ.