ಪ್ರತಿನಿಧಿ ವರದಿ ಚಾಮರಾಜನಗರ
ತಾಲೂಕಿನ ಹೊಂಗನೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ರೂಪ ಮೋಹನ್ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರುವ ಮೂಲಕ ಗ್ರಾಪಂ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಜೆ.ಯೋಗೇಶ್, ಮುಖಂಡ ವೀರಣ್ಣ, ಸಿ.ಮಹದೇವ್, ಶಂಕರ್, ಮೋಹನ್, ಉಪಾಧ್ಯಕ್ಷ ನವೀನ್, ಚಾಟೀಪುರ ಗ್ರಾಮದ ಯುವ ಮುಖಂಡ ಡಿ.ವಿಜಯ್, ಜಯರಾಜು,ಇರಸವಾಡಿ ಮೋಹನ್, ಸದಸ್ಯ ಮಣಿಕಂಠ, ನಿರ್ಮಲಾ ರಾಮು, ವಿಶಾಲಾಕ್ಷಿ, ರಂಗಸ್ವಾಮಿ ನಾಯಕ, ಕವಿತಾ ನಟರಾಜ್ ಸೇರಿದಂತೆ ಇತರರು ಇದ್ದರು.