ಸ್ಯಾಂಡಲ್ ವುಡ್ ಮೋಹಕ ತಾರೆ, ಸಕತ್ ಬ್ಯುಟಿ ನಟಿ ರಮ್ಯಾ ಮದುವೆ ವಿಚಾರ ಈಗ ಜೋರಾಗಿಯೇ ಸದ್ದು ಮಾಡ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ನವೆಂಬರ್ ನಲ್ಲಿ ಮೋಹಕನಟಿ ರಮ್ಯಾ ಮದುವೆ ಆಗಲಿದ್ದಾರೆ. ಈ ಹಿಂದೆ ಹಲವಾರು ಬಾರಿ ರಮ್ಯಾ ಮದುವೆ ವಿಚಾರ ಕರ್ನಾಟಕದ ಹಾಟ್ ಟಾಪಿಕ್ ಆಗಿತ್ತು. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಮದುವೆ ವಿಷಯ ಪ್ರಸ್ತಾಪವಾಗುತ್ತಿತ್ತು. ಈಗ ಅಂತಿಮವಾಗಿ ರಮ್ಯಾ ಸಪ್ತಪದಿ ತುಳಿಯಲಿದ್ದು ನವೆಂಬರ್ ನಲ್ಲಿ ಹಸೆ ಮಣೆ ಏರಲಿದ್ದಾರೆ.
ರಾಜಸ್ಥಾನ ಮೂಲದ ಟೆಕ್ಸ್ಟೈಲ್ ಉದ್ಯಮಿಯೊಬ್ಬರ ಜೊತೆ ಮುಂದಿನ ತಿಂಗಳು ರಮ್ಯಾರ ನಿಶ್ಚಿತಾರ್ಥವಾಗಲಿದೆ ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ನವೆಂಬರ್ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ ಅನ್ನೋ ಮಾತುಗಳು ಕೇಳಿಬರ್ತಿದೆ.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇದೇ ವರ್ಷ ಮದುವೆ ಆಗ್ತಿದ್ದಾರೆ ಎಂಬ ಮಾತು ಕಳೆದ 3-4ತಿಂಗಳಿಂದ ಸಿನಿ ವಲಯದಲ್ಲಿ ಜೋರಾಗಿ ಕೇಳಿಬರ್ತಿತ್ತು. ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಆಪ್ತ ವಲಯದಿಂದ ಮಾಹಿತಿ ಹೊರಬಿದ್ದಿತ್ತು. ಇದು ಕೇವಲ ರೂಮರ್ಸ್ ಅಂತ ಕೆಲವರು ಮಾತಾಡಿಕೊಂಡಿದ್ರು. ಈ ವದಂತಿಗೆ ಪುಷ್ಠಿ ಎಂಬಂತೆ ಈಗ ಮದ್ವೆ ಮಾತು ವ್ಯಾಪಕವಾಗಿ ಚರ್ಚೆ ಆಗ್ತಿದ್ದು, ರಮ್ಯಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮೋಹಕ ತಾರೆ ರಮ್ಯಾ ಗೆ ಈಗಾಗ್ಲೇ 41 ವರ್ಷ ವಯಸ್ಸಾಗಿದ್ದು, ಅನೇಕ ಬಾರಿ ಮದುವೆ ಬಗ್ಗೆ ನಟಿಗೆ ಪ್ರಶ್ನೆಗಳು ಎದುರಾಗಿತ್ತು. ಮದುವೆ ವಿಚಾರದಲ್ಲಿ ನಟಿ ಹಲವು ಬಾರಿ ತಮಾಷೆ ಮಾತುಗಳನ್ನು ಆಡುತ್ತಾ ರೂಮರ್ಸ್ಗಳನ್ನು ತಳ್ಳಿ ಹಾಕಿದ್ರು. ಈಗ ರಮ್ಯಾ ಯಾವ ರೀತಿ ಕ್ಲಾರಿಟಿ ಕೊಡ್ತಾರೆ ಅನ್ನೋದೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.