ಬೆಂಗಳೂರು: ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಸಿನಿಮಾ ‘UI’ ಕುರಿತ ಮೇಜರ್ ಅಪ್ಡೇಟ್ ಹೊರಬಿದ್ದಿದೆ. ರಿಯಲ್ ಸ್ಟಾರ್ – ಸೂಪರ್ ಸ್ಟಾರ್ ಉಪೇಂದ್ರ ಡೈರೆಕ್ಷನ್ ನ ಪ್ಯಾನ್ ಇಂಡಿಯಾ ಯುಐ ಸಿನಿಮಾ ತಂಡದಿಂದ ಸೂಪರ್ ನ್ಯೂಸ್ ರಿವೀಲ್ ಆಗಿದ್ದು, ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ಈ ಸಿನಿಮಾದಲ್ಲಿ ನಟನೆ ಮಾಡ್ತಿರೋದು ಪಕ್ಕಾ ಆಗಿದೆ.
ಈಗಾಗ್ಲೇ ಚಿತ್ರದ ಕಥೆ ಏನಿರಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಯುಐ ಪ್ರತಿ ವಿಷಯ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಭಾರೀ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದಲ್ಲಿ
ಬಾಲಿವುಡ್ ಬ್ಯೂಟಿ ಸಖತ್ ಹಾಟ್ ಲುಕ್ ಗೆ ಫೇಮಸ್ ಆಗಿರೋ ಸನ್ನಿ ಲಿಯೋನ್ ಆ್ಯಕ್ಟ್ ಮಾಡಿರೋದು ನಿರೀಕ್ಷೆಯನ್ನ ದುಪ್ಪಟ್ಟಾಗಿಸಿದೆ. ಅಂದ್ಹಾಗೆ ಸನ್ನಿ ಲಿಯೋನ್ ಕನ್ನಡದಲ್ಲಿ ನಟಿಸುತ್ತಿರುವ 3ನೇ ಸಿನಿಮಾ ಇದಾಗಿದೆ.
ಯುಐ ಸಿನಿಮಾಗೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು ಉಪೇಂದ್ರ ಜೊತೆ ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಯುಐ ಚಿತ್ರತಂಡ ಸನ್ನಿ ಲಿಯೋನ್ ಪೋಸ್ಟರ್ ರಿವೀಲ್ ಮಾಡಿದ್ದು, ಸನ್ನಿ ಕೇವಲ ಹಾಡಿನಲ್ಲಷ್ಟೇ ಇರುತ್ತಾರಾ, ಇಲ್ಲ ಸಿನಿಮಾದಲ್ಲಿ ವಿಶೇಷ ಪಾತ್ರವೇನಾದರೂ ಮಾಡಿದ್ದಾರಾ ಅನ್ನೋದೇ ಸದ್ಯದ ಸಸ್ಪೆನ್ಸ್ ಆಗಿದೆ. ದೀಪಾವಳಿಗೆ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಚಿತ್ರತಂಡಕ್ಕಿದೆ.