ನಟ ದರ್ಶನ್ ಮತ್ತುಅವರ ಆಪ್ತ ಗೆಳತಿ ಪವಿತ್ರಾ ಗೌಡ ಕುರಿತ ಒಂದೊಂದೇ ವಿಚಾರ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹೆಸರು ಹೈಲೈಟ್ ಆಗುತ್ತಿದೆ. ನಟಿ ಪವಿತ್ರಾ ಗೌಡ ಈ ಪ್ರಕರಣದಲ್ಲಿ ಎ1 ಆರೋಪಿ ಆದರೂ ಅವರಿಗಿಂತ ಹೆಚ್ಚಾಗಿ ಚರ್ಚೆಯಲ್ಲಿ ಇರುವ ಹೆಸರು ದರ್ಶನ್ ಅವರದ್ದು. ವಿಚಾರಣೆ ವೇಳೆ ಪವಿತ್ರಾಗೌಡ ಗೆಳತಿ ಸಮತಾ ಅವರು ಒಂದಷ್ಟು ವಿಚಾರಗಳನ್ನು ಪೊಲೀಸರ ಎದುರು ಹೇಳಿದ್ದಾರೆ. ಈ ಬಗ್ಗೆ ಚಾರ್ಜ್ ಶೀಟ್ ನಲ್ಲಿಯೂ ಹಲವು ಅಂಶಗಳನ್ನ ಉಲ್ಲೇಖ ಮಾಡಲಾಗಿದೆ.
ದರ್ಶನ್ ಸೇರಿದಂತೆ 17 ಜನರು ಕೊಲೆ ಆರೋಪ ಹೊತ್ತಿದ್ದಾರೆ. ಪ್ರಕರಣ ಸಂಬಂಧ ದರ್ಶನ್, ಪವಿತ್ರಾ ಸೇರಿ ಅನೇಕ ಆಪ್ತರ ಹೇಳಿಕೆಯನ್ನು ವಿಚಾರಣೆ ವೇಳೆ ಪಡೆಯಲಾಗಿದೆ. ಈ ಪೈಕಿ ಪವಿತ್ರಾ ಗೆಳತಿ ಸಮತಾ ಹೇಳಿಕೆಯೂ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ. ಕೊಲೆಗೂ ಮುನ್ನ ದರ್ಶನ್ ಹಾಗೂ ಪವಿತ್ರಾ ಮಧ್ಯೆ ಕಿರಿಕ್ ಆಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ವಿಜಯಲಕ್ಷ್ಮೀ ಜೊತೆಗಿನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದರ್ಶನ್ ದುಬೈ ಗೆ ಹೋಗಿದ್ದರು. ಇದರಿಂದ ಪವಿತ್ರಾ ಹಾಗೂ ದರ್ಶನ್ ನಡುವೆ ಮನಸ್ತಾಪ ಉಂಟಾಗಿತ್ತಂತೆ. ರೇಣುಕಾಸ್ವಾಮಿ ಕಿಡ್ನ್ಯಾಪ್ ಬಳಿಕವೇ ಪವಿತ್ರಾ ಜೊತೆ ದರ್ಶನ್ ಮಾತನಾಡಿದ್ದು ಎಂದು ಸಮತಾ ಪೋಲೀಸರ ಮುಂದೆ ಹೇಳಿದ್ದಾರೆ.
ಇನ್ನು ಕೊಲೆಯಾದ ದಿನ ಪಟ್ಟಣಗೆರೆ ಶೆಡ್ ಬಳಿ ಹೋಗೋದಕ್ಕೂ ಮುನ್ನ ಸಮತಾಗೆ ಪವಿತ್ರಾ ವಾಟ್ಸಾಪ್ ಕಾಲ್ ಮಾಡಿದ್ದರು. ಈ ವೇಳೆ ಶೆಡ್ ಬಳಿ ಹೋಗಬೇಡ ಎಂದು ಸಮತಾ ಬುದ್ಧಿವಾದ ಕೂಡ ಹೇಳಿದ್ದರು. ಈ ವೇಳೆ ಮನೆಗೆ ದರ್ಶನ್ ಬಂದ ಕಾರಣ ಪವಿತ್ರಾ ಕಾಲ್ ಕಟ್ ಮಾಡಿದ್ದರು ಎನ್ನಲಾಗಿದೆ. ಶೆಡ್ ಗೆ ಹೋಗಿ ಬಂದ ಬಳಿಕ ಮತ್ತೆ ಸಮತಾಗೆ ಪವಿತ್ರಾ ಕಾಲ್ ಮಾಡಿದ್ದರು. ರೇಣುಕಾಸ್ವಾಮಿ ಕೈಯಲ್ಲಿ ಕ್ಷಮೆ ಕೇಳಿಸಿದ್ದಾಗಿ ಪವಿತ್ರಾ ಹೇಳಿದ್ದರು ಎಂಬ ಮಾಹಿತಿಯನ್ನ ಸಮತಾ ಹೇಳಿದ್ದಾರೆ.
ಜೂನ್ 9ರಂದು ಸಂಜೆ ಪಾಕಾಶಾಲಾ ಹೋಟೆಲ್ನಲ್ಲಿ ಪವಿತ್ರಾ ಹಾಗೂ ಸಮತಾ ಕಾಫಿ ಕುಡಿದಿದ್ದರು. ಕಾಫಿ ಕುಡಿದು ನಂತರ ಪವಿತ್ರಾ ಅವರು ಸಮತಾ ಮನೆಗೆ ತೆರಳಿ, ಸಮತಾ ಗಂಡನ ಬಳಿ ರೇಣುಕಾಸ್ವಾಮಿ ಶವದ ಕುರಿತು ಮಾಹಿತಿ ಪಡೆದಿದ್ದರು. ಸಮತಾ ಪತಿ ಸುರೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಫ್ರೊಫೆಸರ್ ಆಗಿದ್ದಾರೆ. ಈ ಎಲ್ಲಾ ಅಂಶ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.