ಮೈಸೂರು: ಮೈಸೂರಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ ನಡೆಸಿದ್ದ ವೈದ್ಯರು ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಬೋಗಾದಿಯಲ್ಲಿರುವ ಪ್ರತಿಷ್ಠಿತ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಬಾರಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿಕೆಯಾಗಿದೆ. ಬೆಂಗಳೂರನ್ನು ಹೊರತುಪಡಿಸಿ ಇಡೀ ಕರ್ನಾಟಕದಲ್ಲಿ ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಮೈಟ್ರಾಕ್ಲಿಪ್ ವಾಲ್ವ್ ರಿಪೇರ್ ಕಾರ್ಯ ವಿಧಾನ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಆಸ್ಪತ್ರೆಯ ಮುಖ್ಯ ಇಂಟರ್ವೇನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ ರಾಜಗೋಪಾಲ್ ಜಂಬುನಾಥನ್ ನೇತೃತ್ವದಲ್ಲಿ ನಡೆದಿರುವ ಕಾರ್ಯ ವಿಧಾನದಲ್ಲಿ, ತಾಂಜನಿಯಾ ಮೂಲದ 59 ವರ್ಷದ ವ್ಯಕ್ತಿಗೆ ಮೊದಲ ಮೈಟ್ರಾಕ್ಲಿಪ್ ವಾಲ್ವ್ ಅಳವಡಿಸುವಲ್ಲಿ ರಾಜಗೋಪಾಲ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿದೆ.ಈ ಮೂಲಕ ಮಹತ್ವದ ಸಾಧನೆಗೈದಿರುವ ಬಗೆಗೆ ಡಾ ಬಾಲಕೃಷ್ಣಗೌಡ ಹಾಗೂ ಡಾ ಜೆ ರಾಜಗೋಪಾಲನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಲೋಕೇಶ್ , ಸಿಓ ಎ ವಿ ರಾಮಪ್ರಸಾದ್ ಉಪಸ್ಥಿತರಿದ್ದರು.