ಚಲುವರಾಯಸ್ವಾಮಿ ಸಚಿವರಾಗಿರಲು ಅನ್ ಫಿಟ್, ಮಾನಮರ್ಯಾದೆ ಇದ್ರೆ ಚಲುವರಾಯಸ್ವಾಮಿ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಆಗ್ರಹ ಮಾಡಿದ್ದಾರೆ.
ಮಂಡ್ಯದ ನಾಗಮಂಗಲ ಕೋಮುಗಲಭೆ ಪ್ರಕರಣ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮಾಯಕರನ್ನ ಬಂಧಿಸಿದ್ದೇವೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ, ಸಚಿವರು ಒಪ್ಪಿಕೊಂಡ್ರೆ ಸರ್ಕಾರವೇ ಒಪ್ಪಿಕೊಂಡಂತೆ. ಸಿಎಂ ಸಿದ್ದರಾಮಯ್ಯ ಇಷ್ಟೊಂದು ದುರ್ಬಲರಾಗುತ್ತಾರೆ ಅಂದುಕೊಂಡಿರಲಿಲ್ಲ.ಇನೋಸೆಂಟ್ ಅಂತ ಗೊತ್ತಾದ ಮೇಲೆ ಜೈಲಿಗೆ ಹಾಕಿದ್ದೇಕೆ.? ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಮತ್ತೆ ಭಯ ಇರೋದಿಲ್ಲ. ಅಮಾಯಕನನ್ನ ಬಂಧಿಸಿದವರಿಗೆ ಏನು ಶಿಕ್ಷೆ ಕೊಟ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಧಿಕಾರ, ದುಡ್ಡಿನ ಅಮಲಿನಲ್ಲಿ ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ ಇವರ ಪಾಪದ ಕೊಡ ತುಂಬಿದೆ, ಇದಕ್ಕೆಲ್ಲ ಟೈಮ್ ಬರುತ್ತೆ. ಗಲಭೆ ತಡೆಯೋದು ಬಿಟ್ಟು ಪೊಲೀಸರು ಆದೇಶಕ್ಕಾಗಿ ಕಾಯುತ್ತಿದ್ರು. ಗಲಾಟೆ ನಡೆಯುವ 10 ನಿಮಿಷದ ಮುನ್ನ ಸ್ಥಳದಲ್ಲಿ ರಿಸರ್ವ್ ವ್ಯಾನ್ ಏಕೆ ಹೋಯ್ತು.? ಸಸ್ಪೆಂಡ್ ಆದ ಇನ್ಸ್ ಪೆಕ್ಟರ್ ಮೊಬೈಲ್ ಕಾಲ್ ಲೀಸ್ಟ್ ಚೆಕ್ ಮಾಡಿದ್ರೆ ಎಲ್ಲವೂ ಬಹಿರಂಗ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.