ಭಾರತದ ಬ್ಯೂಟಿ ಕ್ವೀನ್ ಐಶ್ವರ್ಯ ರೈ ಇವತ್ತಿಗೂ ಮೋಸ್ಟ್ ಅತಿಸುಂದರಿ. ಮಗಳು ಆರಾಧ್ಯಳು ಕೂಡ ಅಷ್ಟೇ ಸುಂದರಿ. ತಮ್ಮ ಮಗಳಿಗೆ ಐಶ್ವರ್ಯ ರೈ ಸಂಸ್ಕಾರ-ಸಂಪ್ರದಾಯ ಎರಡನ್ನೂ ಕೂಡ ಕಲಿಸಿಯೇ ಬೆಳೆಸಿದ್ದಾರೆ. ಅದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆಯೇ ದೊಡ್ಡ ಉದಾಹರಣೆ ಆಗಿದೆ.
ಕನ್ನಡದ ಸ್ಟಾರ್ ಹೀರೋ ಶಿವರಾಜ್ಕುಮಾರ್ ಅವರನ್ನು ನೋಡುತ್ತಿದ್ದಂತೆ ಆರಾಧ್ಯಾ ಅವರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.ಐಶ್ವರ್ಯಾ ರೈ ಹಾಗೂ ಅವರ ಮಗಳು ಆರಾಧ್ಯಾ ಇತ್ತೀಚೆಗೆ ಸೈಮಾ ಅವಾರ್ಡ್ಸ್ಗೆ ತೆರಳಿದ್ದರು. ದುಬೈನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕನ್ನಡದ ಹಲವು ಹೀರೋಗಳು ಇದರಲ್ಲಿ ಭಾಗಿ ಆಗಿದ್ದರು. ಶಿವರಾಜ್ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಈ ವೇಳೆ ಐಶ್ವರ್ಯಾ ಹಾಗೂ ಶಿವರಾಜ್ಕುಮಾರ್ ಅವರ ಭೇಟಿ ಆಗಿದೆ. ಐಶ್ವರ್ಯಾ ರೈ ಶಿವರಾಜ್ಕುಮಾರ್ ಅವರನ್ನು ನೋಡುತ್ತಿದ್ದಂತೆ ಓಡೋಡಿ ಬಂದು ಶಿವಣ್ಣನಿಗೆ ಶೇಕ್ಹ್ಯಾಂಡ್ ಮಾಡಿದರು. ಇದರ ಜೊತೆಗೆ ಅಲ್ಲೇ ಇದ್ದ ಮಗಳಿಗೆ ಶಿವರಾಜ್ಕುಮಾರ್ ಅವರನ್ನು ಪರಿಚಯಿಸಿದರು. ಆಗ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.