ಮೈಸೂರು: ಮೈಸೂರಿನ ಆಲನಹಳ್ಳಿಯ ಗ್ಯಾರೇಜ್ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಗ್ಯಾರೇಜ್ ನಲ್ಲಿದ್ದ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಕಳೆದ ತಡರಾತ್ರಿ ನಡೆದಿರುವ ಘಟನೆಯಿಂದಾಗಿ
ರಿಪೇರಿಗಾಗಿ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗಾಹುತಿಯಾಗಿವೆ.
ಆಲನಹಳ್ಳಿಯ ಶ್ರೀನಿವಾಸ್ ಎಂಬುವವರಿಗೆ ಸೇರಿದ ಎಸ್ ಎನ್ ಮೋಟರ್ ಗ್ಯಾರೇಜ್ ನಲ್ಲಿ ಘಟನೆ ಜರುಗಿದ್ದು, ಹ್ಯಾರೇಜ್ ನಲ್ಲಿ ನಿಲ್ಲಿಸಲಾಗಿದ್ದ ಬೈಕ್, ಮೊಪೇಡ್ ಸೇರಿದಂತೆ ಗ್ಯಾರೇಜ್ ನ ಸಲಕರಣೆಗಳು ಬೆಂಕಿಗಾಹುತಿಯಾಗಿದೆ. ಘಟನೆ ಸಂಬಂಧ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.