ಬೆಂಗಳೂರು: ಕಿರುತೆರೆ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಮನೆಯಲ್ಲಿ ಪುಟ್ಟ ಮಗುವಿನ ಆಗಮನವಾಗಿದೆ. ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಕವಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಪತಿ ಚಂದನ್ ಕುಮಾರ್ ತಮ್ಮ ಅಭಿಮಾನಿಗಳೊಂದಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಚಂದನ್ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ “ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ” ಅನ್ನೋ ಮೂಲಕ ಮಗನ ಮೊದಲ ವಿಡಿಯೋವನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ. ವೀಡಿಯೋದಲ್ಲಿ ಚಂದನ್ ಪುಟ್ಟ ಕಂದನ ಕಾಲುಗಳನ್ನು ತಮ್ಮ ಕೈಗಳಲ್ಲಿ ಹಿಡಿದಿರುವ ವಿಡೀಯೋವನ್ನ ಶೇರ್ ಮಾಡಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಮಳೆ ಹರಿಸಿದ್ದಾರೆ.