ಲೆಬನಾನ್ನಲ್ಲಿ ನಿನ್ನೆಯಷ್ಟೇ ಸರಣಿ ಪೇಜರ್ಸ್ ಸ್ಫೋಟಗಳು ಆತಂಕವನ್ನುಂಟು ಮಾಡಿತ್ತು. ಪೇಜರ್ ಸ್ಫೋಟದ ಒಂದು ದಿನದ ಅಂತರದಲ್ಲಿ, ಹಿಜ್ಬುಲ್ಲಾದಲ್ಲಿ ಮತ್ತೊಂದು ದಾಳಿ ನಡೆದಿದೆ. ಇಂದು ವಾಕಿಟಾಕಿಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ. ಈ ಸ್ಫೋಟದಲ್ಲಿ 9 ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೈರುತ್, ಬೆಕಾ ಕಣಿವೆ ಮತ್ತು ದಕ್ಷಿಣ ಲೆಬನಾನ್ ಎಂಬ ಮೂರು ಪ್ರದೇಶಗಳಲ್ಲಿ ಹಿಜ್ಬುಲ್ಲಾ ಸದಸ್ಯರಿಗೆ ಸೇರಿದ ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎಂದು ಲೆಬನಾನಿನ ಮಾಧ್ಯಮಗಳು ವರದಿ ಮಾಡಿವೆ.
ಬೆಕಾ ಕಣಿವೆಯ ಸೊಹ್ಮೋರ್ ಟೌನ್ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಲವಾರು ಪ್ರದೇಶಗಳಲ್ಲಿನ ಮನೆಗಳಲ್ಲಿ ಸೋಲಾರ್ ಸಿಸ್ಟಮ್ ಸ್ಫೋಟಗೊಂಡಿದ್ದು, ಬಾಲಕಿ ಗಾಯಗೊಂಡಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆಗಳಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ.