ಮೈಸೂರು: ಶಾಸಕ ಮುನಿರತ್ನ ವಿರುದ್ಧ ಎಸ್ಐಟಿ ತನಿಖೆ ಮಾಡಲು ಸಚಿವರು ಶಾಸಕರು ಪತ್ರ ಕೊಟ್ಟಿದ್ದಾರೆ.ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಮೈಸೂರಲ್ಲಿ ಮಾತಾಡಿದ ಅವ್ರು,ಮಾಜಿ ಸಚಿವ ಮುನಿರತ್ನ ಮೇಲೆ ಬಹಳಷ್ಟು ಗಂಭೀರ ಪ್ರಕರಣಗಳು ಇದೆ. ಹೀಗಾಗಿ ವಿಶೇಷ ತನಿಖಾ ತಂಡದ ಅಗತ್ಯ ಇದೆ ಎಂದು ಕೇಳಿದ್ದಾರೆ. ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.
ಇನ್ನು, ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಸಚಿವರು ಬಿಡುಗಡೆ ಮಾಡಿದ್ದಾರೆ.ನಾನು ಆ ದಾಖಲೆಗಳನ್ನ ನೋಡುತ್ತೇನೆ. ಆ ಭೂಮಿ ಕುಮಾರಸ್ವಾಮಿ ಭಾಮೈದನಿಗೆ ರಿಜಿಸ್ಟರ್ ಆಗಿದೆ. ಕುಮಾರಸ್ವಾಮಿ ಅವರ ಅತ್ತೆಗೆ ಹಲವರು ಜಿಪಿಎ ಮಾಡಿಕೊಟ್ಟಿದ್ದಾರೆ. ಇದು ಬಹಳ ಗಂಭೀರವಾದ ಪ್ರಕರಣ. ನೋಡೊಣಾ ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ ಅಂತ ಹೇಳಿದ್ರು. ಕುಮಾರಸ್ವಾಮಿ ಯಾವಗಲೂ ಹಿಟ್ ಅಂಡ್ ರನ್ ಕೇಸ್. ತಮ್ಮ ಮೇಲಿನ ಎಲ್ಲಾ ಆರೋಪಕ್ಕೆ ಕೂಡ ಹಿಟ್ ಅಂಡ್ ರನ್ ರೀತಿ ಮಾತನಾಡಿ ಹೋಗುತ್ತಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ರು.