ಗೋಣಿಕೊಪ್ಪ: 27ನೇ ಆಲ್ ಇಂಡಿಯಾ ಕರಾಟೆ ಡೊ ಶಿಟೊ ರ್ಯು ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲೆಯ ವಿದ್ಯಾರ್ಥಿಗಳು ಕಂಚಿನ ಪದಕ ಗೆದ್ದಿದ್ದಾರೆ.
ಕಟಾ ವಿಭಾಗದಲ್ಲಿ ಮನ್ವಿತಾ, ಅಹಾನಾ, ತಸ್ಯ, ಪಾವನಿ, ಯುಕ್ತಿ, ಪ್ರಣಣ್ಯ, ಅದಿತಿ, ಸಿ.ಎಸ್.ವೈಷ್ಣವಿ, ಇಶಾನಿ ಕಂಚು ಸಾಧನೆ ಮಾಡಿದ್ದಾರೆ. ಕುಮಿಟೆಯಲ್ಲಿ ಯುಕ್ತಿ ಕಂಚು ಸಾಧನೆ ಮಾಡಿದ್ದಾರೆ. ತರಬೇತುದಾರ ಜಮ್ಮಡ ಜೋಯಪ್ಪ, ಸುಮನ್, ಪ್ರಾಂಶುಪಾಲ ಡಾ.ಎಂ.ರಾಮಚಂದ್ರನ್ ಅಭಿನಂದಿಸಿದರು.
ಫೋಟೋ 20 ಜಿಕೆಪಿ 03 ; ಕರಾಟೆಯಲ್ಲಿ ಸಾಧನೆ ಮಾಡಿರುವ ಗೋಣಿಕೊಪ್ಪ ಕಾಪ್ಸ್ ಶಾಲೆಯ ವಿದ್ಯಾರ್ಥಿಗಳು.