ಮೈಸೂರು: ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಯಾರು ಬೇಕಾದರೂ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಅಷ್ಟೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಮೈಸೂರಿನಲ್ಲಿ ಹೇಳಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮಹಿಷ ಮಂಡಲೋತ್ಸವ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಇಂತಹದನ್ನು ಮಾಡಿ, ಮಾಡಬೇಡಿ ಎಂದು ಹೇಳಲು ನಾವು ಯಾರು. ಭಾರತದ ನಾಗರೀಕತೆಯಲ್ಲೇ ನೀರು, ಕಲ್ಲು, ಮಣ್ಣನ್ನು ಪೂಜೆ ಮಾಡುವ ಸಂಸ್ಕೃತಿ ಇದೆ. ಅವರವರ ಧಾರ್ಮಿಕ ನಂಬಿಕೆ ಅವರವರದ್ದು.ನೀವು ಮಾಡಲೇ ಬೇಡಿ ಎಂದು ವಿರೋಧ ಮಾಡುವುದಕ್ಕೆ ಯಾರಿಗೂ ಹಕ್ಕಿಲ್ಲ. ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಯಾರು ಬೇಕಾದರೂ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಅಷ್ಟೆ. ಎಲ್ಲಾ ಪರಿಸ್ಥಿತಿಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಮಹಿಷ ಮಂಡಲೋತ್ಸವ ಆಚರಣೆಗೆ ಪರೋಕ್ಷವಾಗಿ ಸಚಿವ ಡಾ ಎಚ್ ಸಿ ಮಹದೇವಪ್ಪ ಒಪ್ಪಿಗೆ ಸೂಚಿಸಿದ್ದಾರೆ.