ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯ ಎಲ್ಲರ ಗಮನ ಸೆಳೆದಿದೆ. ದಸರಾ ಪ್ರಯುಕ್ತ ಡಿ ದೇವರಾಜ ಅರಸು ವಿವಿದೊಧ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯ ಆಯೋಜನೆ ಮಾಡಲಾಗಿದ್ದು, ಕುಸ್ತಿ ಪಂದ್ಯಗಳು ನೋಡುಗರ ಮೈನವಿರೇಳಿಸುತ್ತಿದೆ.
ಕುಸ್ತಿ ಪಂದ್ಯಕ್ಕೆ ಅಂದಿನ ಮೈಸೂರು ಅರಸರು ಸಾಕಷ್ಟು ಉತ್ತೇಜನ ನೀಡಿದ್ದರು. ಅರಸೊತ್ತಿಗೆ ಅಂತ್ಯಗೊಂಡ ಬಳಿಕವೂ ಕುಸ್ತಿ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಈ ಬಾರಿಯ ದಸರಾ ಕುಸ್ತಿ ಪಂದ್ಯದಲ್ಲಿ ದೇಶದ ವಿವಿಧೆಡಗಳಿಂದ ಆಗಮಿಸಿರುವ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಮದ ಗಜಗಳಂತೆ ಕಾದಾಡುವ ಕುಸ್ತಿಪಟುಗಳು ಕುಸ್ತಿ ನಿಜಕ್ಕೂ ರೋಚಕವಾಗಿದೆ.ಪಟ್ಟು ಪ್ರತಿಪಟ್ಟು ಹಾಕುವ ಕುಸ್ತಿಪಟುಗಳ ವರಸೆಯನ್ನು ಕಂಡು ಜನರು ಸಂತಸಪಡುತ್ತಿದ್ದಾರೆ.