ಪ್ರತಿನಿಧಿ ವರದಿ ಮೂರ್ನಾಡು
ಕೊಡವ ಮುಸ್ಲಿಂ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಅವರ ಕುಟುಂಬದವರಿಗಾಗಿ ಹೊದ್ದೂರು ಮುಕ್ಕೋಲೆ ಎಸ್ಟೇಟ್ ಸ್ಟೇ ಆವರಣದಲ್ಲಿ ಕೌಟುಂಬಿಕ ಸಂತೋಷಕೂಟ ನಡೆಯಿತು.
ಸಾಂಪ್ರದಾಯಿಕ ಅಬ್ಲ್ ಕೊಯೆ (ಅವಲಕ್ಕಿಯಿಂದ ಮಾಡಲಾಗುವ ವಿಶೇಷ ಖಾದ್ಯ) ತಯಾರಿಕೆಗೆ ಚಾಲನೆ ನೀಡುವ ಮೂಲಕ ಆರಂಭಗೊಂಡಿತು.
ಕೆ.ಎಂ.ಎ.ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಉದ್ಘಾಟಿಸಿ ಮಾತನಾಡಿದರು.
ಸಂಘ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಸದಸ್ಯರು ಸಕ್ರಿಯರಾಗಬೇಕಾದರೆ ಕುಟುಂಬ ವರ್ಗದವರ ಸಹಕಾರ ಮುಖ್ಯ. ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಸಂಘಟನೆಗಳ ಬೆಳವಣಿಗೆಗೆ ಸಹಕಾರಿ ಎಂದರು.
ಹೊದ್ದೂರು ಗ್ರಾ.ಪಂ.ಅಧ್ಯಕ್ಷ ಹರಿಶ್ಚಂದ್ರ ಎ.ಹಂಸ ಮಾತನಾಡಿ, ಆಡಳಿತ ಮಂಡಳಿ ಸದಸ್ಯರೆಲ್ಲಾರೂ ಒಂದೇ ಕುಟುಂಬ ಎಂಬ ಭಾವನೆ ಮೂಡುತ್ತದೆ. ಕೌಟುಂಬಿಕ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಅವರನ್ನು ಸನ್ಮಾನಿಸಲಾಯಿತು.
ವಿಜೇತರು: ಪುಟಾಣಿಗಳ ಕಾಳು ಎರೆಕುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ (ಪ್ರ), ಆಶ್ಮ್ ಮೊಹಮ್ಮದ್ (ದ್ವಿ), ಮತ್ತು ರಿಫಾನ್ ರಫೀಕ್ (ತೃ), ಪುಟಾಣಿಗಳ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಶಾಲಿನ್ ಸರ್ಫುದ್ದೀನ್ (ಪ್ರ), ಆಶ್ಮ್ ಮೊಹಮ್ಮದ್ (ದ್ವಿ), ರಿಫಾನ್ ರಫೀಕ್ (ತೃ), ಮಿನ್ಹಾ ಮರಿಯಂ (4ನೇ ಸ್ಥಾನ), ಬಾಲಕರ ವಿಭಾಗದ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಕುಂಡAಡ ರಝೀನ್ ರಜಾಕ್ (ಪ್ರ), ಮಂಡೆAಡ ಮುಜಮಿಲ್ ಮೊಯ್ದು (ದ್ವಿ), ಕುಂಡಂಡ ಸುಹೈಬ್ ರಜಾಕ್ (ತೃ), ಬಹುಮಾನ ಪಡೆದುಕೊಂಡರು.
ಬಾಲಕರ ಸಂಗೀತ ಕುರ್ಚಿ ವಿಭಾಗದಲ್ಲಿ ಆಲೀರ ರಮೀಜ್ ರಶೀದ್ (ಪ್ರ), ಪುಡಿಯಂಡ ಆಶೀರ್ ಹನೀಫ್ (ದ್ವಿ), ಮಂಡೆಂಡ ಮುಜ್ತಬಾ ಮೊಯ್ದು (ತೃ), ಪುರುಷರ ಸಂಗೀತ ಕುರ್ಚಿ ವಿಭಾಗದಲ್ಲಿ ಮಂಡೆಂಡ ಮುಶ್ರಫ್ ಮೊಯ್ದು (ಪ್ರ), ಕರ್ತೊರೆರ ಶರ್ಪುದ್ದೀನ್ (ದ್ವಿ) ಮತ್ತು ಕರ್ತೊರೆರ ಮುಸ್ತಫ (ತೃ), ಮಹಿಳೆಯರ ಸಂಗೀತ ಕುರ್ಚಿ ವಿಭಾಗದಲ್ಲಿ ಕರ್ತೊರೆರ ರಝಿಯಾ ಮುಸ್ತಫ (ಪ್ರ), ಪುಡಿಯಂಡ ಫಾಹಿಲಾ ಸಾದುಲಿ (ದ್ವಿ), ಮತ್ತು ಮಿತಲತಂಡ ಅಜ್ಮಿಯ ಇಸ್ಮಾಯಿಲ್ (ತೃ) ಸ್ಥಾನ ಪಡೆದುಕೊಂಡರು.
ಪುರುಷರ ಹೌಸಿ ಹೌಸಿ (ತಾಂಬೋಲ) ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿಗೆ ನಡೆದ ಸ್ಪರ್ಧೆಯಲ್ಲಿ ಚಿಮ್ಮಿಚ್ಚಿರ ಕೆ.ಇಬ್ರಾಹಿಂ ಹಾಜಿ, ಕರ್ತೊರೆರ ಮುಸ್ತಫ, ಕುಂಡಂಡ ರಮೀಜ್, ದುದ್ಧಿಯಂಡ ಮಾಶೂಕ್ ಸೂಫಿ, ಚಿಮ್ಮಿಚ್ಚಿರ ಕೆ.ಇಬ್ರಾಹಿಂ ಹಾಜಿ, ಮಹಿಳೆಯರ ವಿಭಾಗದಲ್ಲಿ ಕುಂಡಂಡ ರಿಶಾನ ರಜಾಕ್, ಅಕ್ಕಳತಂಡ ಫಿದಾ ಸಾನಿಯಾ, ಆಲೀರ ಆಯಿನ್, ದುದ್ಧಿಯಂಡ ಮುಸ್ಕಾನ್ ಸೂಫಿ ಪ್ರಥಮ ಸ್ಥಾನ ಪಡೆದುಕೊಂಡರು.
ಸಂಸ್ಥೆ ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಜಂಟಿ ಕಾರ್ಯದರ್ಶಿ ಕರ್ತೊರೆರ ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಹಿರಿಯ ಪದಾಧಿಕಾರಿಗಳಾದ ಕುಪ್ಪಂದಿರ ಯೂಸೂಫ್ ಹಾಜಿ, ಆಲೀರ ಬಿ.ಅಬ್ದುಲ್ಲಾ, ಪುಡಿಯಂಡ ಸಾದುಲಿ, ಚಿಮ್ಮಿಚ್ಚಿರ ಕೆ.ಇಬ್ರಾಹಿಂ (ಉಮ್ಮಣಿ) ಹಾಜಿ, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಮಂಡೇಂಡ ಎ. ಮೊಯ್ದು ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ಇದ್ದರು.
ಫೋಟೋ ; 12 ಎಂಡಿಕೆ 01 ; ಕೌಟುಂಬಿಕ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಕುಟುಂಬ ವರ್ಗ