ದಢೀರ್-ದಿಢೀರ್
ನಿನ್ನೆಯಿಂದ-ಮಂಗಳವಾರದಿಂದ
5:30-ಸಂಜೆ 5.30
ದಂಪತಿಗಳು-ದಂಪತಿ
ಸಂಬವ-ಸಂಭವ
ವಿಜಯ ಅವರು-ವಿಜಯ
ಭಾರಿ-ಬಾರಿ
——————————————
ನೆರವಾಗಲು ಸಂತ್ರಸ್ತರಿಂದ ಮನವಿ
ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ತಾಲೂಕಿನ ಪಡುಕೋಟೆ ಗ್ರಾಮದಲ್ಲಿ ಸುಮಾರು 30 ವರ್ಷಗಳ ಹಿಂದೆ ಲ್ಯಾಂಡ್ ಆರ್ಮಿ ನಿಗಮದಿಂದ ನಿರ್ಮಿಸಿದ್ದ ವಾಸದ ಮನೆ ದಿಢೀರ್ ಕುಸಿದು ಬಿದ್ದಿದೆ.
ಗ್ತಾಮದ ವಿಜಯ ಎಂಬುವರಿಗೆ ಸೇರಿದ ಮನೆಯು ಕಳೆದ 5, 6 ವರ್ಷಗಳ ಕಾಲದಿಂದಲೂ ಸುರಿದ ಮಳೆಗೆ ಶಿಥಿಲಗೊಂಡಿತ್ತು. ಮಂಗಳವಾರದಿಂದ ಸುರಿದ ಮಳೆಗೆ ಏಕಾಏಕಿ ಸ. 5.30ರ ಸುಮಾರಿನಲ್ಲಿ ಕುಸಿದು ಬಿದ್ದಿದೆ.
ಮನೆ ಕುಸಿತದ ಪರಿಣಾಮ ಅಗತ್ಯ ಪೀಠೋಪಕರಣಗಳು ಸೇರಿದಂತೆ ಇತರೆ ವಸ್ತುಗಳು ದ್ವಂಸಗೊಂಡಿವೆ. ವಿಜಯ ಮತ್ತು ದಂಪತಿಗಳು ದಿನಗೂಲಿ ಕೆಲಸಕ್ಕೆ ಹೋಗಿರುವಾಗ ಈ ಅವಘಡ ಸಂಭವಿಸಿ ರುವುದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಡುಬಡವರಾಗಿರುವ ದಂಪತಿ ದಿಢೀರ್ ಘಟನೆ ಸಂಭವಿಸಿರುವುದರಿಂದ ವಾಸಿಸಲು ಮನೆಯಿಲ್ಲದೆ ಪರದಾಡು ವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮನೆ ನಿರ್ಮಿಸಿಕೊಡುವಂತೆ ವಿಜಯ ಅವರು ಮನವಿ ಮಾಡಿದ್ದಾರೆ.
ಗ್ರಾಮಸ್ಥ ಸುಬ್ರಹ್ಮಣ್ಯ ಮಾತನಾಡಿ, ನಿಗಮದಿಂದ ಸುಮಾರು 45 ವರ್ಷಗಳ ಹಿಂದೆ ಗ್ರಾಮದಲ್ಲಿ 50 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ನಂತರದಿಂದ ಇಲ್ಲಿಯವರೆಗೆ ಇವುಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಗ್ರಾಪಂ ಗೆ ಹೊಸ ಮನೆ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆಯಾದರೂ, ಈವರೆಗೆ ಅಧಿಕಾರಿ ಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲಿ ನಮಗೆ ನೆರವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.