ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ರಾತ್ರಿ ವೇಳೆ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಭಾರಿಗಾತ್ರದ ಹೆಬ್ಬಾವು ವಾಹನಸವಾರರ ಕಣ್ಣಿಗೆ ಕಂಡಿದೆ. ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ಹೆಬ್ಬಾವು ಕಂಡು ವಾಹನ ಸವಾರರು ಗಾಬರಿಗೊಂಡಿದ್ದಾರೆ.
ಕೆಲಸಮಯ ರಸ್ತೆ ಬದಿಯಲ್ಲಿಯೇ ಇದ್ದ ಹೆಬ್ಬಾವು, ನಂತರ ಅರಣ್ಯ ಪ್ರದೇಶದೊಳಗೆ ತೆರಳಿದೆ. ಈ ದೃಶ್ಯವನ್ನು ಕೆಲ ವಾಹನ ಸವಾರರು ಮೊಬೈಲ್ ನಲ್ಲಿ ಹೆಬ್ಬಾವಿನ ದೃಶ್ಯ ಸೆರೆ ಹಿಡಿದಿದ್ದಾರೆ ಅಲ್ಲದೆ ಕೆಲಕಾಲ ಅಲ್ಲೇ ನಿಂತು ಹೆಬ್ಬಾವು ವೀಕ್ಷಣೆ ಮಾಡಿದ್ದಾರೆ. ಇದೀಗ ಹೆಬ್ಬಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.