ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2024ರ ಅಂಗವಾಗಿ ಮೈಸೂರು ಜಿಲ್ಲಾಡಳಿತದಿಂದ ವಿಶೇಷ ಹಾಡಿನ ವಿಡಿಯೋ ರಿಲೀಸ್ ಮಾಡಲಾಗಿದೆ. ಮೈಸೂರು ದಸರಾ ಹಾಗೂ ಸಂಸ್ಕೃತಿಯ ಮೌಲ್ಯ ಸಾರುವ ಹಾಡು ಇದಾಗಿದ್ದು, ಇದೀಗ ವೀಡಿಯೋ ಅನಾವರಣ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ಹಾಡಿನ ವೀಡಿಯೋ ಮೂಡಿಬಂದಿದೆ.
ಅಪರ ಜಿಲ್ಲಾಧಿಕಾರಿ ಶಿವರಾಜ್ ಸಾಹಿತ್ಯ ಬರೆದಿದ್ದಾರೆ. ಮೈಸೂರು ದಸರೆಯ ವೈಭವ, ಅರಮನೆ, ಚಾಮುಂಡಿಬೆಟ್ಟದ ವಿಡಿಯೋ ಬಳಸಿಕೊಂಡು ಹಾಡು ರಚನೆ ಮಾಡಲಾಗಿದೆ. ಗೀತೆಯ ಮೂಲಕ ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸಲು ಮೈಸೂರು ಜಿಲ್ಲಾಡಳಿತ ಹೊಸ ಪ್ರಯತ್ನ ಮಾಡಿದೆ.
ಹಾಡನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ https://youtu.be/e2SoFUfumDo?feature=shared