ಬೆಂಗಳೂರು : ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಂಡಿದೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ. ಈ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಲಮಂಡಳಿ ಕೆರೆಗಳ ಮೊರೆ ಹೋಗಿದೆ. ಐಐಎಸ್ಸಿ ಸಹಯೋಗದಲ್ಲಿ ಬೆಂಗಳೂರಿನ ಎಂಟು ಕೆರೆಗಳಲ್ಲಿ ಫಿಲ್ಟರ್ ಬೋರ್ ವೆಲ್ ಅಳವಡಿಸಲು ತಯಾರಿ ನಡೆಸಿದೆ. ಅದರಂತೆ ಮೊದಲಿಗೆ ನಾಯಂಡಹಳ್ಳಿ ಕೆರೆ, ಚಿಕ್ಕ ಬಾಣವಾರ ಕೆರೆ, ವರ್ತೂರು ಕೆರೆ ಸೇರಿದಂತೆ ಎಂಟು ಕೆರಳ ನೀರನ್ನು 10 ರಿಂದ 15 ದಿನಗಳಲ್ಲಿ ಸಂಗ್ರಹಿಸಲಾಗುತ್ತಾದೆ. ಬಳಿಕ ತಜ್ಞರು ನೀರಿನ ಗುಣಮಟ್ಟ ಪರಿಶೀಲಿಸಲಿದ್ದಾರೆ.
ತಜ್ಞರ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವೆಂದು ವರದಿ ಬಂದರೇ, ಬಳಿಕ ಬೋರ್ವೆಲ್ ಕೊರೆಯಲಾಗುತ್ತದೆ. ನಂತರ ನೀರು ಶುದ್ಧೀಕರಣ ಮಾಡಿ, ಬಳಿಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.