ಪ್ರತಿನಿಧಿ ವರದಿ ಚಾಚರಾಜನಗರ
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಮತಗಟ್ಟೆ 221 ವಿಶೇಷಚೇತನ ಸ್ನೇಹಿ ಮತಗಟ್ಟೆಯಾಗಿದೆ. ಇಲ್ಲಿ ವಿಶೇಷ ಚೇತನರಿಗೆ ನೆರವಾಗುವ ರ್ಯಾಂಪ್. ರೇಲಿಂಗ್, ವೀಲ್ ಚೇರ್, ಬೂದಗಾಜು, ಸ್ವಯಂ ಸೇವಕರ , ವಿಶೇಷ ಚೇತನ ಸ್ನೇಹಿ ಶೌಚಾಲಯ ವ್ಯವಸ್ಥೆ, ವಾಹನ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗಿತ್ತು.
ಈ ಮತಗಟ್ಟೆಯು ವಿಕಲಚೇತನ ಸ್ನೇಹಿಯಾಗಿದ್ದು, ಮತಗಟ್ಟೆಯ ಹೊರಗೆ ವಿಶೇಷ ಚೇತನರ ಸಾಧನ ಸಲಕರಣೆಗಳು ಹಾಗೂ ಅಂಧರ ಕಲಿಕಾ ಸಾಮಗ್ರಿಗಳ ಮಾದರಿ ಪ್ರದರ್ಶನ ಮಾಡಲಾಗಿತ್ತು. ಇದು ಮತದಾರರ ಗಮನ ಸೆಳೆಯಿತು.
26ಸಿಎಚ್ಎನ್.5:
ಚಿತ್ರವಿದೆ