ರಾಯಚೂರು: ನಟ ಡಾಲಿ ಧನಂಜಯ್ ಮದುವೆ ಆಗೋ ಖುಷಿಯಲ್ಲಿದ್ದಾರೆ. ಅದಕ್ಕೂ ಮೊದಲು ಒಪ್ಪಿರೋ ಸಿನಿಮಾಗಳ ಕೆಲಸ ಪೂರ್ತಿ ಮಾಡೋ ಹುಮ್ಮಸ್ಸಿನಲ್ಲೂ ಇದ್ದಾರೆ. ಎರಡು ಭಾಷೆಯಲ್ಲಿ ಬರ್ತಿರೋ ಝೀಬ್ರಾ ಚಿತ್ರದ ಕೆಲಸ ಪೂರ್ಣಗೊಂಡಿದು, ರಿಲೀಸ್ ಹಂತಕ್ಕೆ ಬಂದಿರೋ ಈ ಚಿತ್ರದ ಪ್ರಸಾರ ಕೂಡ ಜೋರಾಗಿಯೇ ಇದೆ. ಈ ಚಿತ್ರದ ಪ್ರಚಾರದಲ್ಲಿಯೇ ಡಾಲಿ ಧನಂಜಯ್ ಬ್ಯುಸಿ ಇದ್ದಾರೆ. ಇದರ ಮಧ್ಯೆ ಡಾಲಿ ಧನಂಜಯ್ ಮಂತ್ರಾಲಯದ (Mantralaya) ರಾಯರ ದರ್ಶನ ಪಡೆದುಕೊಂಡಿದ್ದಾರೆ.

ಮಂತ್ರಾಲಯಕ್ಕೆ ಭೇಟಿ ನೀಡಿರುವ ನಟ ಡಾಲಿ ಧನಂಜಯ್, ಬೆಳಗ್ಗೆನೆ ಅಲ್ಲಿ ರಾಯರ ದರ್ಶನ ಪಡೆದಿದ್ದಾರೆ. ತಮ್ಮ ಝೀಬ್ರಾ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿಯೇ ಡಾಲಿ ಇಲ್ಲಿಗೆ ಬಂದಿದ್ದಾರೆ. ಹಾಗೆ ಬಂದಾಗ್ಲೆ ಡಾಲಿ ಇಲ್ಲಿ ರಾಯರ ದರ್ಶನ ಪಡೆದುಕೊಂಡಿದ್ದಾರೆ. ಈ ವೇಲೆ ತಮ್ಮ ನೆಚ್ಚನ ನಟನನ್ನು ಕಂಡು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
