ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಕಲ ಸಿದ್ದತೆಗಳು ಭರದಿಂದ ಸಾಗಿದೆ. ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರಿಂದ ಕುಶಾಲತೋಪು ಸಿಡಿಸುವ ಡ್ರೈಪ್ರಾಕ್ಟೀಸ್ ಪ್ರಗತಿಯಲ್ಲಿದೆ. ಅರಮನೆ ಆವರಣದಲ್ಲಿ ಡ್ರೈ ಪ್ರಾಕ್ಟೀಸ್ ನಲ್ಲಿ ನಿರತರಾಗಿರುವ ಸಿಎಆರ್ ಸಿಬ್ಬಂದಿಗಳು ಏಳು ಫಿರಂಗಿ ಗಾಡಿಗಳ ಮೂಲಕ ಪೋಲಿಸರು ತಾಲೀಮು ನಡೆಸುತ್ತಿದ್ದಾರೆ.
ದಸರಾ ಮಹೋತ್ಸವದ ಹಿನ್ನೆಲೆ ಜಗತ್ಪ್ರಸಿದ್ಧ ಮೈಸೂರು ಅರಮನೆಗೆ ಹೊಸ ವಿದ್ಯುತ್ ಬಲ್ಪ್ ಗಳನ್ನು ಅಳವಡಿಸುವ ಕಾರ್ಯ ಪ್ರಾರಂಭವಾಗಿದೆ. ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಿಷ್ಕ್ರಿಯ ಬಲ್ಪ್ ಗಳ ಬದಲಾವಣೆ ಕಾರ್ಯ ನಡೆಲಿದ್ದು, ಇಂದು ನಿಷ್ಕ್ರಿಯ ಆಗಿರುವ ವಿದ್ಯುತ್ ಬಲ್ಪ್ ಗಳನ್ನು ಬದಲಿಸುವುದರಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಹೊಸ ವಿದ್ಯುತ್ ಬಲ್ಪ್ ಗಳ ಅಳವಡಿಕೆಯಿಂದಾಗಿ ಅರಮನೆ ಮತ್ತಷ್ಟು ಜಗಮಗಿಸಲಿದೆ.