ಗೋಣಿಕೊಪ್ಪ: ಮತ್ತೂರು ಗ್ರಾಮದ ಶ್ರೀ ಚಾಮುಂಡಿ ದೇವಿಯ ಉತ್ಸವ ನಡೆಯಿತು.
ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವದಲ್ಲಿ ಪಾಲ್ಗೊಂಡು ಭಕ್ತರು ಪುನೀತರಾದರು. ಕಿರುಗೂರು, ಮತ್ತೂರು, ಕೊಟ್ಟೂರು, ಮುಗುಟಗೇರಿ, ಬೆಸಗೂರು ನಲ್ಲೂರು ಗ್ರಾಮಗಳ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ದೇವರ ಉತ್ಸವಕ್ಕೆ ಚಾಲನೆ ದೊರೆಯಿತು. ರಾತ್ರಿ ಶ್ರೀ ಚಾಮುಂಡಿ ದೇವರು, ಕರಿ ಚಾಮುಂಡಿ ತೆರೆ, ವಿಷ್ಣುಮೂರ್ತಿ ತೆರೆ, ಭೈರವ ತೆರೆ, ಕುಟ್ಟೀಚಾತ ತೆರೆ, ಭಗವತಿ ತೆರೆ, ನೂಚ್ಚುಟ್ಟಿ ತೆರೆ ಹಾಗೂ ಹುಲಿ ಚಾಮುಂಡಿ ತೆರೆ ದರ್ಶನ ನೀಡಿತು. ಹರಕೆ ಕಾಣಿಕೆಗಳನ್ನು ಒಪ್ಪಿಸಿ ಪುನೀತರಾದರು. ಹಿರಿಯರಾದ ಚೆಪ್ಪುಡಿರ ಪೊನ್ನಪ್ಪ ಮುಂದಾಳತ್ವದಲ್ಲಿ ನೆರವೇರಿತು.
ಫೋಟೋ 19 ಜಿಕೆಪಿ 01 ; ಮತ್ತೂರು ಗ್ರಾಮದ ಚಾಮುಂಡಿ ದೇವಿಯ ಉತ್ಸವ