ಚಿಕ್ಕಬಳ್ಳಾಪುರ : ಕೈಮಗ್ಗ ಉತ್ಪನ್ನಗಳ ಅಭಿವೃದ್ದಿಗಾಗಿ ಕೈಮಗ್ಗ ನೇಯ್ಗೆ ವೃತ್ತಿಯಲ್ಲಿ ನೈಪುಣ್ಯತೆ,ಶ್ರೇಷ್ಠತೆ,ತಾಂತ್ರಿಕತೆ,ಉತ್ಕೃಷ್ಠತೆ ಹೊಂದಿರುವ ಉತ್ಪನ್ನಗಳ ಉತ್ಪಾದನೆಯಲ್ಲಿ ತೊಡಗಿರುವ ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಯು ನಗದು ಬಹುಮಾನವಾಗಿದ್ದು, ರೇಷ್ಮೆ ವಲಯದಲ್ಲಿ ಪ್ರಥಮ ಬಹುಮಾನ 25,000 ರೂ, ದ್ವಿತೀಯ ಬಹುಮಾನ 20,000 ರೂಗಳಾಗಿರುತ್ತದೆ. ಹತ್ತಿ ವಲಯದಲ್ಲಿ ಪ್ರಥಮ ಬಹುಮಾನ 20,000 ರೂ, ದ್ವಿತೀಯ ಬಹುಮಾನ 15,000 ರೂಗಳಾಗಿದ್ದು, ಉಣ್ಣೆ ವಲಯದಲ್ಲಿ 15,000 ರೂ.ಗಳು ಜೊತೆಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು.
ಅರ್ಹ ಕೈಮಗ್ಗ ನೇಕಾರರು ಖುದ್ದಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಠಡಿ ಸಂಖ್ಯೆ: ಎಸ್.ಎ-14, 2ನೇ ಮಹಡಿ, ಜಿಲ್ಲಾಡಳಿತ ಭವನ, ಚಿಕ್ಕಬಳ್ಳಾಪುರ ಈ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಮೇ 31 ರೊಳಗಾಗಿ ಸಲ್ಲಿಸತಕ್ಕದ್ದು.
ಅರ್ಹತೆಗಳು:
ಕೈಮಗ್ಗ ನೇಕಾರರು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಯಸ್ಸು ಕನಿಷ್ಠ 30 ವರ್ಷ ಪೂರೈಸಿರಬೇಕು.10 ವರ್ಷಗಳ ಅನುಭವ ಹೊಂದಿರಬೇಕು. ಉತ್ಪನ್ನದ ಮಾದರಿ ಸ್ವತಃ ಅರ್ಜಿದಾರರೇ ತಯಾರಿಸಿದ ಉತ್ಪನ್ನವೇ ಆಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08156-277031, 9986392953, 8971754927, 9945594959 ಗೆ ಸಂಪರ್ಕಿಸಬಹುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment