ಚಿಕ್ಕಬಳ್ಳಾಪುರ : 2024-2025 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆಗಳಿಗೆ 6 ನೇ ತರಗತಿಗೆ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರತಕ್ಕದ್ದು. 5 ನೇ ತರಗತಿಯಲ್ಲಿ ಶೇ 60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಗ್ರಾಮಾಂತರ ಆಂಗ್ಲ ಪ್ರೌಢ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ. ಡಾಲ್ಪಿನ್ ಹಿರಿಯ ಪ್ರಾಥಮಿಕ ಶಾಲೆ, ನಲ್ಲಿಮರದಹಳ್ಳಿ ರೋಡ್ , ಶಿಡ್ಲಘಟ್ಟ. ಡಾಲ್ಪಿನ್ ಹಿರಿಯ ಪ್ರಾಥಮಿಕ ಶಾಲೆ(ಸಿಬಿಎಸ್ಸಿ)ನಲ್ಲಿಮರದಹಳ್ಳಿ ರೋಡ್, ಶಿಡ್ಲಘಟ್ಟ. ಎಸ್.ಎಫ್.ಎಸ್ ಸೂಲ್ಕ್, ಎಂ.ಜಿ ರೋಡ್, ಚಿಂತಾಮಣಿ. ಸೆಂಟ್ಸ್ ಅನಾನ್ಸ್ ಸೂಲ್ಕ್(ಐ.ಸಿ.ಎ.ಸಿ.ಇ) ಮಾದನಹಳ್ಳಿ, ಗೌರಿಬಿದನೂರು. ನ್ಯೂ ಹ್ರೆರೈಜೆನ್ ಇಂಗ್ಲೀಷ್ ಸೂಲ್ಕ್, ಚಿಕ್ಕಬಳ್ಳಾಪುರ. ಶ್ರೀ ಅರವಿಂದ್ರ ಪ್ರಾಥಮಿಕ ಮತ್ತು ಪ್ರೌಢ ಶಾಲೆ, (ಆಂಗ್ಲ) ಗುಡಿಬಂಡೆ ಪ್ರತಿಷ್ಟಿತ ಶಾಲೆಗಳಿಗೆ ಪ್ರವೇಶ ನೀಡಲಾಗುತ್ತದೆ.
ಚಿಕ್ಕಬಳ್ಳಾಪರದ ಸಮಾಜ ಕಲ್ಯಾಣ ಇಲಾಖೆ, ಉಪನಿರ್ದೇಶಕರ ಕಚೇರಿ, ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಮೇ 9 ರಿಂದ ಅರ್ಜಿ ಪಡೆದು ಮೇ 21 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂರ್ಪಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.