ನಟ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಇರುವ ಪ್ರೀತಿ ಅಪಾರವಾದುದ್ದು. ಇದು ಪದೇ ಪದೇ ಸಾಬೀತು ಆಗುತ್ತಲೇ ಇರುತ್ತದೆ. ಅವರು ಫಾರ್ಮ್ಹೌಸ್ನಲ್ಲಿ ಸಾಕಷ್ಟು ಹಸುಗಳನ್ನು ಸಾಕಿದ್ದಾರೆ. ಪ್ರಾಣಿ-ಪಕ್ಷಿಗಳಿಗೂ ಆಶ್ರಯ ಕೊಟ್ಟಿದ್ದಾರೆ. ಈಗ ದರ್ಶನ್ ಅವರು ಒಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅರ್ಜುನ ಆನೆಯ ಸಮಾಧಿಗೆ ಒಂದು ವ್ಯವಸ್ಥೆ ಆಗಬೇಕು ಎನ್ನುವ ಕೋರಿಕೆಯನ್ನು ಅವರು ಇಟ್ಟಿದ್ದಾರೆ.
‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು’ ಎಂದು ದರ್ಶನ್ ಬರೆದುಕೊಂಡಿದ್ದಾರೆ.
‘ಚಾಮುಂಡೇಶ್ವರಿ ತಾಯಿಯ ದಸರಾ ವೈಭವದ ಸಾರೋಟುಗಾರ ಅರ್ಜುನನ ಸಮಾಧಿ ಮರೆತೇ ಬಿಟ್ಟರೇ ಹೇಗೆ? ಸಂಬಂಧ ಪಟ್ಟವರು ನಮ್ಮ ಗಜರಾಜ ಅರ್ಜುನನ ಮರೆಯದಿರಲಿ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.