ನವದೆಹಲಿ: ಎರಡೂ ಕೈಗಳಿಲ್ಲದೇ ಇದ್ದರೂ ಪ್ಯಾರಾ ಆರ್ಚರಿಯಲ್ಲಿ ಸಾಧನೆ ಮಾಡುತ್ತಿರುವ ಭಾರತದ 16 ವರ್ಷದ ಶೀತಲ್ ದೇವಿ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ ನಡೆದಿದ್ದ ಹಾಂಗ್ಝೋ ಏಷ್ಯನ್ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಶೀತಲ್, ಮಂಗಳವಾರ ಪ್ರಕಟಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 230 ಅಂಕಗಳನ್ನು ಸಂಪಾದಿಸಿದ್ದು, 2 ಸ್ಥಾನ ಮೇಲೇರಿ ಅಗ್ರಸ್ಥಾನ ಪಡೆದಿದ್ದಾರೆ. ಪ್ಯಾರಾ ಏಷ್ಯಾಡ್ನಲ್ಲಿ 3 ಚಿನ್ನ ಗೆದ್ದಿದ್ದ ರಾಕೇಶ್ ಕುಮಾರ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನ ಪಡೆದರೆ, ಸರಿತಾ 7 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ.