ಆಸ್ಟ್ರೇಲಿಯಾ ನೀಡಿದ 209 ರನ್ ಬೃಹತ್ ಟಾರ್ಗೆಟ್ಗೆ ಪ್ರತಿಯಾಗಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಾಯಕ ಸೂರ್ಯುಕುಮಾರ್ ಯಾದವ್ ಹೋರಾಟ ಆಸ್ಟ್ರೇಲಿಯಾ ಲೆಕ್ಕಾಚಾರ ಬದಲಿಸಿತು. ಆದರೆ ಅಂತಿಮ ಹಂತದಲ್ಲಿ ದಿಢೀರ್ ವಿಕೆಟ್ ಪತನ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಸೂರ್ಯ ಕುಮಾರ್ ವಿಕೆಟ್ ಪತನದ ಬಳಿಕ ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಅರ್ಶದೀಪ್ ರನೌಟ್ಗೆ ಬಲಿಯಾದರು.ಆದರೆ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ಭಾರತಕ್ಕೆ ಗೆಲುವು ತಂದುಕೊಟ್ಟಿತು. ಆದರೆ ಇದು ನೋ ಬಾಲ್ ಆಗಿತ್ತು. ಭಾರತ 2 ವಿಕೆಟ್ ರೋಚಕ ಗೆಲುವು ದಾಖಲಿಸಿತು. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಜೋಶ್ ಇಂಗ್ಲಿಸ್ ಸೆಂಚುರಿ ಹಾಗೂ ಸ್ಟೀವನ್ ಸ್ಮಿತ್ ಅರ್ಧಶಕದಿಂದ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. 209 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತು. ರುತುರಾಜ್ ಗಾಯಕ್ವಾಡ್ ಒಂದು ಎಸೆತ ಎದುರಿಸದೇ ವಿಕೆಟ್ ಕೈಚೆಲ್ಲಿದರು. ರುತರಾಜ್ ಗಾಯಕ್ವಾಡ್ ರನೌಟ್ಗೆ ಬಲಿಯಾಗುವ ಮೂಲಕ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಎರಡು ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಬ್ಬರಿಸಲು ಆರಂಭಿಸಿದ ಯಶಸ್ವಿ ಜೈಸ್ವಾಲ್ 8 ಎಸೆತದಲ್ಲಿ 21 ರನ್ ಸಿಡಿಸಿ ಔಟಾದರು.
22 ರನ್ಗೆ ಭಾರತ 2 ವಿಕೆಟ್ ಕಳೆದುಕೊಂಡಿತು. ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಜೊತೆಯಾಟ ಟೀಂ ಇಂಡಿಯಾಗೆ ಅತ್ಯಂತ ಮಹತ್ವದ್ದಾಗಿತ್ತು. ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ರನ್ ಚೇಸ್ ಮತ್ತಷ್ಟು ರೋಚಕವಾಗಿಸಿದರು. ಈ ಜೋಡಿ 112 ರನ್ ಜೊತೆಯಾಟ ನೀಡಿತು. ಪ್ರಮುಖ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ಟೀಂ ಇಂಡಿಯಾಗೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಜೊತೆಯಾಟ ನೆರವಾಯಿತು.
ಇಶಾನ್ ಕಿಶನ್ 58 ರನ್ ಸಿಡಿಸಿ ಔಟಾದರು. ಇತ್ತ ಹಾಫ್ ಸೆಂಚುರಿ ಸಿಡಿಸಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಆದರೆ ತಿಲಕ್ ವರ್ಮಾರಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೆರವಿನಿಂದ ಭಾರತದ ಗೆಲುವಿಗೆ ಅಂತಿಮ 24 ಎಸೆತದಲ್ಲಿ 38 ರನ್ ಅವಶ್ಯಕತೆ ಇತ್ತು.